ಅಪಹರಣದ ಹಿಂದಿರೋ ಸತ್ಯಗಳೇನು.. ವಂಚಕನ “ಗೇಟ್ ಕೀಪರ್” ಆಗಿರೋ ಕಾಂಗ್ರೆಸ್ ಮುಖಂಡನ ತಮ್ಮ…!

ಧಾರವಾಡ: ಅವಳಿನಗರದ ಪೊಲೀಸ್ ಕಮೀಷನರೇಟಿನ ಅಧಿಕಾರಿಗಳ ತಂಡ ಪತ್ತೆ ಮಾಡಿರುವ ಪ್ರಕರಣದಲ್ಲಿ ಹಲವು ಸತ್ಯಗಳು ಒಂದೊಂದಾಗಿ ಹೊರಗೆ ಬರತೊಡಗಿವೆ. ನೂರಾರೂ ಜನರಿಗೆ ನೌಕರಿ ಕೊಡಿಸುವುದಾಗಿ ವಂಚನೆ ಮಾಡಿರೋ ಆರೋಪ ಎದುರಿಸುತ್ತಿರುವ ವ್ಯಕ್ತಿಗೆ ಧಾರವಾಡದ ಕಾಂಗ್ರೆಸ್ ಮುಖಂಡನ ತಮ್ಮನೋರ್ವ ಕಾವಲು ಕಾಯುತ್ತಿರುವುದು ಬಹಿರಂಗಗೊಂಡಿದೆ.

ಹೌದು.. ವಿವಿಧ ಇಲಾಖೆಗಳಲ್ಲಿ ನೌಕರಿ ಕೊಡಿಸುವುದಾಗಿ ಹಲವರಿಂದ ಹಣವನ್ನ ಪಡೆದುಕೊಂಡಿದ್ದ ಚೆನ್ನಬಸು ಭಜಂತ್ರಿ ಎಂಬಾತನ ಬೆಂಗಾವಲಿಗೆ ಧಾರವಾಡದ ಸೋ ಕಾಲ್ಡ್ ಲೀಡರ್ ನ ತಮ್ಮನೋರ್ವ ಗೇಟು ಕಾಯಲು ನಿಂತಿದ್ದಾನೆಂದು ಹೇಳಲಾಗಿದೆ.
ಬಡವರ, ನಿರ್ಗತಿಕರ ಹಣವನ್ನ ದೋಚಿದವರ ಮನೆ ಬಾಗಿಲನ್ನ ಯಾರೂ ಬರದಂತೆ ಕಾಯಲು ನಿಂತಿರುವ ಕಾಂಗ್ರೆಸ್ ಮುಖಂಡನ, ತಮ್ಮನನ್ನ ಪೊಲೀಸರು ಹೆಡಮುರಿಗೆ ಕಟ್ಟುವ ಸಾಧ್ಯತೆಯಿದೆ.
ಕಮೀಷನರೇಟಿನ ಮೂರು ತಂಡಗಳು ಅಪಹರಣ, ವಂಚನೆ ಪ್ರಕರಣವನ್ನ ಬೇಧಿಸುವತ್ತ ದಾಪುಗಾಲು ಹಾಕಿದ್ದು, ಈಗಾಗಲೇ ಉಮೇಶ ಭಜಂತ್ರಿಯನ್ನ ಬಂಧನ ಮಾಡಿದ್ದಾರೆ. ಚೆನ್ನಬಸು ಭಜಂತ್ರಿಯ ಮಗನನ್ನ ಅಪಹರಣ ಮಾಡಿದ್ದ ಇಬ್ಬರಿಗಾಗಿ ಶೋಧ ನಡೆದಿದೆ. ಅಷ್ಟರಲ್ಲೇ ನೌಕರಿಯ ಆಮಿಷವೊಡ್ಡಿದವನ ಮನೆಯನ್ನ ಕಾಯುತ್ತಿರುವುದು ಕಾಂಗ್ರೆಸ್ ಮುಖಂಡನ ತಮ್ಮನೆಂಬುದು ಗೊತ್ತಾಗಿದ್ದು, ಮತ್ತಷ್ಟು ರಹಸ್ಯಗಳು ಹೊರಗೆ ಬರುವ ಸಾಧ್ಯತೆಯಿದೆ.