Posts Slider

Karnataka Voice

Latest Kannada News

4 ಸಾವಿರಕ್ಕೆ ಮಗು ಅಪಹರಣ- ಕಾಲು ಹಿಡಿಸಿಕೊಳ್ಳದ ಎಸ್ಪಿ: 48 ಗಂಟೆ ‘ಆ’ ಕಾರ್ಯಾಚರಣೆ…

Spread the love

ನೆಲಮಂಗಲ: ಆ ದಂಪತಿಗಳು ತಮ್ಮ 18 ತಿಂಗಳ ಮಗುವನ್ನ ಪ್ರೀತಿಯಿಂದ ಸಾಕುತ್ತಿದ್ದರು. ಅವಳ ಹೆಸರನ್ನೇ ಅದೇ ಕಾರಣಕ್ಕೆ ಭಾಗ್ಯಲಕ್ಷ್ಮೀ ಎಂದಿಟ್ಟಿದ್ದರು. ಆದರೆ, ಕಿರಾತಕರಿಬ್ಬರು ಹಣದ ಆಸೆಗಾಗಿ ಆಕೆಯನ್ನ ಅಪಹರಿಸಿದ್ದರು. ಕಂದನ ಅಪಹರಣದಿಂದ ಕಂಗಾಲಾದ ದಂಪತಿಗಳಿಗೆ  ದೇವರಾಗಿದ್ದು ಪೊಲೀಸರು.

ಹೌದು.. ನೆಲಮಂಗಲದ ಮಾಚೋಹಳ್ಳಿಯ ರವಿ ಮತ್ತು ಲಕ್ಷ್ಮೀ ದಂಪತಿಗಳ ಮಗುವನ್ನ ಆಂದ್ರಹಳ್ಳಿಯ ತಿಪ್ಪೇಶ ಹಾಗೂ ರಾಜೇಶ ಅಪಹರಣ ಮಾಡಿದ್ದರು. ಈ ಬಗ್ಗೆ ಪೊಲೀಸರ ಗಮನಕ್ಕೆ ಬಂದ ತಕ್ಷಣವೇ ಫೀಲ್ಡಿಗಿಳಿದ ಮಾದದನಾಯಕನಹಳ್ಳಿ ಪೊಲೀಸರು, 48 ಗಂಟೆಗಳಲ್ಲಿ ಆರೋಪಿಗಳನ್ನ ಬಂದಿಸುವಲ್ಲಿ ಯಶ ಸಾಧಿಸಿದ್ದಾರೆ.

ಮಗುವನ್ನ ಪತ್ತೆ ಮಾಡಿ, ಆರೋಪಿಗಳನ್ನ ಹೆಡಮುರಿಗೆ ಕಟ್ಟಿದ  ಮೇಲೆ ನಡೆದದ್ದು ಮನಕಲಕುವ ಘಟನೆ. 48 ಗಂಟೆಯಿಂದ ದೂರವಾಗಿದ್ದ ಮಗುವನ್ನ ದಂಪತಿಗಳಿಗೆ ಕೊಟ್ಟಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಚೆನ್ನಣ್ಣನವರ.

ದಂಪತಿಗಳಿಬ್ಬರು ರವಿ ಚೆನ್ನಣ್ಣನವರಿಗೆ ಧನ್ಯವಾದ ತಿಳಿಸಿದರು. ಅಷ್ಟೇ ಅಲ್ಲ, ಮಗುವಿನ ತಂದೆ ರವಿ ಕಾಲಿಗೆ ಬಿದ್ದು ನಮಸ್ಕಾರ ಮಾಡಲು ಮುಂದಾದಾಗ ರವಿ ಚೆನ್ನಣ್ಣನವರ ಹಾಗೇಲ್ಲ ಮಾಡಬಾರದೆಂದು ಮಗುವಿನೊಂದಿಗೆ ಬೀಳ್ಕೋಟ್ಟರು.


Spread the love

Leave a Reply

Your email address will not be published. Required fields are marked *