ಖೊಟ್ಟಿ ದಾಖಲೆ ಸೃಷ್ಟಿಸಿ “ಸ್ಥಳ ಮಾರಾಟ”- ಜಯಕರ್ನಾಟಕ ಜನಪರ ವೇದಿಕೆ ಗೌರವಾಧ್ಯಕ್ಷ ಮೋಹಿತೆ ಅರೆಸ್ಟ್…
1 min readಧಾರವಾಡ: ನಿವೃತ್ತ ಸೇನಾಧಿಕಾರಿಯ ಪತ್ನಿಯನ್ನ ಯಾಮಾರಿಸಿ ಆಕೆಯ ಜಾಗವನ್ನೇ ಮಾರಾಟ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಗೌರವಾಧ್ಯಕ್ಷ ತುಕಾರಾಮ ಮೋಹಿತೆ ಸೇರಿದಂತೆ ನಾಲ್ವರನ್ನ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ವಿವರ:
ರಾಜೇಶ್ವರಿ ಬಸಲಿಂಗಪ್ಪ ಯರಗಟ್ಟಿ ಎಂಬ ಮಹಿಳೆಯ ಆಸ್ತಿಗಾಗಿ ( 31/12/2021ರಲ್ಲಿ ಮೃತ ಯೋಧನ ಪತ್ನಿ) ಉಣಕಲ್ ಗ್ರಾಮ ರಿ.ಸರ್ವೇ640/ಅ,plot no. 2/10, ಕ್ಷೇತ್ರ 2ಗುಂಟೆ 13ಆಣೆ ಆಸ್ತಿಯನ್ನು, ಬಸವ್ವ ರಾಜೇಶ್ವರಿ ಆಗಿ ಖೊಟ್ಟಿ ದಾಖಲೆ(ಆಧಾರ್‌ಕಾರ್ಡ್, PAN CARD ಸಮೇತ) ಮಾಡಿ, ಆಸ್ತಿಯನ್ನ ಕೆಐಡಿಬಿಗೆ ಮಾರಾಟ ಮಾಡಿ 20,98,026/- ಹಣವನ್ನು ಗುಳುಂ ಮಾಡಿದ್ದರು.
ಎಲ್ಲರೂ ಆರೋಪಿಗಳು ಕೂಡಿಕೊಂಡು ಎರಡು ಗುಂಟೆ ಜಾಗವನ್ನು, ಯಾರೋ ಬಸವ್ವ ಎಂಬಾಕೆಯನ್ನು ರಾಜೇಶ್ವರಿ ಎಂದು ಖೊಟ್ಟಿ ದಾಖಲೆ ಸೃಷ್ಟಿಸಿ20-21 ಲಕ್ಷ ಲೂಟಿ ಮಾಡಿದ್ದರು.
ಆರೋಪಿಗಳನ್ನ ಬಸವ್ವ, ಕಲ್ಲಯ್ಯ ಪೂಜಾರಿ, ತುಕಾರಾಮ್ ಮೋಹಿತೆ ಹಾಗೂ ಓಸಿಮಠ್ ಎಂದು ಗುರುತಿಸಲಾಗಿದ್ದು, ನಾಲ್ವರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.