KIDB ಹಗರಣ: ತನಿಖೆ ತೀವ್ರ- ರಾಜಕಾರಣಿಗಳು, ಪೊಲೀಸರು ಇನ್‌ವಾಲ್ವ್…!!!?

ಧಾರವಾಡ: ರೈತರ ಹೆಸರಿನಲ್ಲಿ ಕೋಟಿ ಕೋಟಿ ಹಣ ಗುಳಂ ಮಾಡಿರುವ ಪ್ರಕರಣವನ್ನ ಸಾಮಾಜಿಕ ಕಾರ್ಯಕರ್ತ ಬಸವರಾಜ ಕೊರವರ ಅವರು ಹೊರಗೆ ಹಾಕಿದ್ದೆ ತಡ, ಒಂಬತ್ತು ಜನ ಅಧಿಕಾರಿಗಳ ತಂಡ ಸಮಗ್ರ ತನಿಖೆಗೆ ಮುಂದಾಗಿದೆ.
ಐಐಟಿಗೆ ಭೂಮಿ ಸ್ವಾಧೀನಪಡಿಸಿಕೊಳ್ಳುವಾಗ ರೈತರಿಗೆ ಹಣವನ್ನ ಪರಿಹಾರವಾಗಿ ನೀಡಲಾಗಿತ್ತು. ಆದರೆ, ಮತ್ತೆ ಪರಿಹಾರ ಪಡೆದ ರೈತರ ಹೆಸರಿನಲ್ಲಿ ಸರಕಾರಕ್ಕೆ ವಂಚನೆ ಮಾಡಿ, ಬ್ಯಾಂಕಿನವರ ಸಹಾಯದಿಂದ 21 ಕೋಟಿಗೂ ಹೆಚ್ಚು ಹಣವನ್ನ ವಂಚನೆ ಮಾಡಲಾಗಿದೆ ಎಂದು ಬಸವರಾಜ ಕೊರವರವರು ಆರೋಪಿಸಿದ್ದರು.
ಈ ಹಿನ್ನೆಲೆಯಲ್ಲಿ ಹಿರಿಯ ಐಎಎಸ್ ಅಧಿಕಾರಿಯೋರ್ವರು ಸೇರಿದಂತೆ ಒಂಬತ್ತು ಜನರ ತಂಡ ತನಿಖೆ ಆರಂಭಿಸಿದೆ. ಈ ಅವ್ಯವಹಾರದಲ್ಲಿ 93 ಬ್ಯಾಚಿನ ಓರ್ವ ಪೊಲೀಸ್ ಕೂಡಾ ಭಾಗಿಯಾಗಿದ್ದಾರೆಂದು ಹೇಳಲಾಗಿದೆ.
ರೈತರ ಹೆಸರಿನಲ್ಲಿ ಹಣ ಪಡೆದಿರುವುದನ್ನ ಸೆಟ್ಲ್ ಮಾಡಲು ಪ್ರಮುಖ ರಾಜಕಾರಣಿಗಳಿಬ್ಬರು ಮುಂದಾಗಿದ್ದು, ಇದರಲ್ಲಿ ಓರ್ವ ಕೆಲವು ಲಕ್ಷಗಳನ್ನ ಪಡೆದಿದ್ದಾನೆಂದು ಹೇಳಲಾಗುತ್ತಿದೆ. ಈ ಮೂಲಕ ಬಸವರಾಜ ಕೊರವರ ಮತ್ತೊಂದು ಭ್ರಷ್ಟಾಚಾರವನ್ನ ಬಯಲಿಗೆ ತರಲು ಕಾರಣವಾಗಿದ್ದಾರೆ. ಹಣ ಪಡೆದಿರುವ ಮತ್ತು ಸೆಟ್ಲಮೆಂಟ್ ಮಾಡಲು ಮುಂದಾಗಿರುವ ರಾಜಕಾರಣಿಗಳ ವಿಚಾರಣೆ ಇಂದು ನಡೆಯುವ ಸಾಧ್ಯತೆಯಿದೆ.