ಹುಬ್ಬಳ್ಳಿಯಲ್ಲಿ ಕಿಚ್ಚ ಸುದೀಪ “ಮಾರ್ಕ್ ಜಾತ್ರೆ”- ಸಾಕ್ಷಿಯಾಗಲಿದೆ ನೆಹರು ಮೈದಾನ…
ಇದೇ ತಿಂಗಳ 20ರಂದು ಹುಬ್ಬಳ್ಳಿಯಲ್ಲಿ ಕಿಚ್ಚನ ಮಾರ್ಕ್ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ
ಇದೇ 20ರಂದು ಗಂಡು ಮೆಟ್ಟಿದನಾಡು ಹುಬ್ಬಳ್ಳಿ ಮಾರ್ಕ್ ಪ್ರೀ-ರಿಲೀಸ್ ಜಾತ್ರೆ..
ಹುಬ್ಬಳ್ಳಿಗೆ ಬರ್ತಿದ್ದಾರೆ ನಿಮ್ಮ ಪ್ರೀತಿಯ ಕಿಚ್ಚ..ಯಾವತ್ತು? ಎಲ್ಲಿ ಅಭಿಮಾನಿಗಳಿಗೆ ಸಿಗಲಿದ್ದಾರೆ?
ಕಿಚ್ಚನ ಮಾರ್ಕ್ ಸಿನಿಮಾದ ಪ್ರಚಾರ ಕಾರ್ಯ ಜೋರಾಗಿ ಸಾಗ್ತಿದೆ. ಟ್ರೇಲರ್, ಹಾಡುಗಳ ಮೂಲಕ ಪ್ರೇಕ್ಷಕರಿಗೆ ಆಮಂತ್ರಣ ಕೊಟ್ಟಿರುವ ಚಿತ್ರತಂಡ ,ನಿಮ್ಮನ್ನು ಭೇಟಿಯಾಗೋದಿಕ್ಕೆ ಗಂಡು ಮೆಟ್ಟಿದನಾಡು ಹುಬ್ಬಳ್ಳಿಗೆ ಬರ್ತಿದೆ.
ಹುಬ್ಬಳ್ಳಿಯಲ್ಲಿ ಮಾರ್ಕ್ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದೇ ತಿಂಗಳ 20 ರಂದು ಕಾರ್ಯಕ್ರಮ ನಡೆಯುತ್ತದೆ. ಕಿಚ್ಚ ಸುದೀಪ್, ಸೇರಿದಂತೆ ಸಿನಿಮಾ ಬಹುತೇಕ ಕಲಾವಿದರು ಹುಬ್ಬಳ್ಳಿಗೆ ಬರ್ತಿದ್ದಾರೆ. ನೆಹರು ಮೈದಾನದಲ್ಲಿ ಮಾರ್ಕ್ ಪ್ರೀ ರಿಲೀಸ್ ಕಾರ್ಯಕ್ರಮ ನಡೆಯಲಿದೆ.
ಮಾರ್ಕ್ ಚಿತ್ರ ಇದೇ ತಿಂಗಳ 25ರಂದು ದೊಡ್ಟಮಟ್ಟದಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾವನ್ನು ವಿಜಯ್ ಕಾರ್ತಿಕೇಯ ಡೈರೆಕ್ಷನ್ ಮಾಡಿದ್ದಾರೆ. ‘ಮ್ಯಾಕ್ಸ್’ ಚಿತ್ರ ಆದ್ಮೇಲೆ ‘ಮಾರ್ಕ್’ ಚಿತ್ರಕ್ಕಾಗಿ ಕಿಚ್ಚ ಸುದೀಪ್ ಜೊತೆಗೆ ಮತ್ತೊಮ್ಮೆ ವಿಜಯ್ ಕಾರ್ತಿಕೇಯ ಕೈ ಜೋಡಿಸಿದ್ದಾರೆ.
‘ಸತ್ಯ ಜ್ಯೋತಿ ಫಿಲ್ಮ್ಸ್’ ಮತ್ತು ‘ಕಿಚ್ಚ ಕ್ರಿಯೇಷನ್’ ಮೂಲಕ ‘ಮಾರ್ಕ್’ ಸಿನಿಮಾ ನಿರ್ಮಾಣವಾಗಿದೆ. ಸುದೀಪ್ ಜೊತೆ ದೀಪ್ಷಿಕಾ, ನವೀನ್ ಚಂದ್ರ, ರೋಶಿನಿ ಪ್ರಕಾಶ್, ಗುರು ಸೋಮಸುಂದರಂ, ಗೋಪಾಲಕೃಷ್ಣ ದೇಶಪಾಂಡೆ, ಡ್ರ್ಯಾಗನ್ ಮಂಜು, ಅರ್ಚನಾ ಕೊಟ್ಟಿಗೆ, ಮಹಾಂತೇಶ್ ಹಿರೇಮಠ್, ಶೈನ್ ಟಾಮ್ ಚಾಕೋ, ಯೋಗಿ ಬಾಬು ಮುಂತಾದವರು ‘ಮಾರ್ಕ್’ ಚಿತ್ರದಲ್ಲಿ ನಟಿಸಿದ್ದಾರೆ.
