ಅಮರಗೋಳದ “KHB”ಯ ನಿವಾಸಿಗಳ ರಸ್ತೆ ಎಂತಹದ್ದಿದೆ ಗೊತ್ತಾ… ‘ಭ್ರಷ್ಟಾಚಾರ-03’…

ಉತ್ತಮ ರಸ್ತೆ ಭಾಗ್ಯದಿಂದ ವಂಚಿತರಾದ ಕೆಎಚ್‌ಬಿ ಜಡ್ಜ್ಸ್ ಕಾಲನಿ ನಿವಾಸಿಗಳು
ಹುಬ್ಬಳ್ಳಿ: ನಗರದ ಅಮರಗೋಳದಲ್ಲಿ ಕರ್ನಾಟಕ ಗೃಹ ಮಂಡಳಿ (ಕೆಎಚ್ ಬಿ ) 2ನೇ ಹಂತದ ಜಡ್ಜ್ಸ್ ಕಾಲನಿಯಲ್ಲಿ ಕಳೆದ 10 ವರ್ಷಗಳಿಂದ ಸಮರ್ಪಕ ನಿರ್ವಹಣೆ ಇಲ್ಲದೆ ಕಾಲೋನಿಯ ಎಲ್ಲ ರಸ್ತೆ ಹಾಳಾಗಿದ್ದು, ನಿವಾಸಿಗಳು ಉತ್ತಮ ರಸ್ತೆ ಭಾಗ್ಯದಿಂದ ವಂಚಿತರಾಗಿದ್ದಾರೆ.
ಪ್ರತಿ ವರ್ಷ ಹುಬ್ಬಳ್ಳಿಯ ಕೆಎಚ್‌ಬಿ ಅಧಿಕಾರಗಳು ನಿರ್ವಹಣೆಗಾಗಿ ನಿವಾಸಿಗಳ ಲಕ್ಷಾಂತರ ರೂಪಾಯಿಗಳನ್ನು ಟೆಂಡರ್ ಮೂಲಕ ವೆಚ್ಚ ಮಾಡಲಾಗುತ್ತಿದ್ದರೂ ಎಲ್ಲ ರಸ್ತೆಗಳು ಹಾಳಾಗಿದ್ದು, ರಸ್ತೆಯ ಎರಡು ಬದಿಯಲ್ಲಿ ಬರಿ ಜಾಲಿ ಮರ, ಗಿಡ-ಗಂಟಿಗಳು ಬೆಳದಿವೆ.
ಸುಮಾರು 109 ಎಕರೆ ವಿಸ್ತಿರ್ಣದಲ್ಲಿ ವಿಸ್ತರಿಸಿರುವ ಬಡಾವಣೆಯಲ್ಲಿ ಅಂದಾಜು 86 ಅಡ್ಡರಸ್ತೆಗಳು ಇದ್ದು ಸಾವಿರಾರು ಜನರು ವಾಸಿಸುವ ಇಲ್ಲಿ ಯಾವದೊಂದು ರಸ್ತೆಯು ಕೆಎಚ್ ಬಿ ಅಧಿಕಾರಗಳು ನಿರ್ವಹಣೆ ಮಾಡಿರುವುದಿಲ್ಲ ಎಂದು ಕಾಲನಿಯ ನಿವಾಸಿಯಾದ ಪದ್ಮಾವತಿ ಬಾವಲಿ ದೂರುತ್ತಾರೆ. “ಕನಿಷ್ಠ ಪಕ್ಷ ಮುಖ್ಯ ರಸ್ತೆಗಳನ್ನಾದರೂ ದುರಸ್ತಿಗೊಳಿಸಿದ್ದರೆ, ಗೌರವಾನ್ವಿತ ನ್ಯಾಯಾಧೀಶರಗಾದರೂ ಅನುಕೂಲವಾಗುತಿತ್ತು. ಇಲ್ಲಿ ಗೌರವಾನ್ವಿತರ ಗೃಹ ವಸತಿಗಳು ಇದ್ದು, ಅವರಿಗೂ ಕೂಡಾ ತೊಂದರೆ ಆಗುತ್ತಿದೆ” ಎಂದು ಅವರು ಕೆಎಚ್ ಬಿ ಅಧಿಕಾರಗಳ ವಿರುದ್ಧ ಇಂತಹ ಗಂಭೀರ ಆರೋಪ ಮಾಡಿದರೂ ಯಾವುದೇ ಪ್ರಯೋಜನೆಯಾಗುತ್ತಿಲ್ಲ ಎಂದರು.
ಇಲ್ಲಿಯ ಜನತೆಗೆ ಸುಗಮ ಸಂಚಾರವು ಕನಸಿನ ಮಾತಾಗೇ ಉಳಿದಿದ್ದು, ಕಳೆದ 10 ವರ್ಷಗಳಿಂದ ಹಲವಾರು ಮನವಿ, ಪ್ರತಿಭಟನೆ ಮಾಡಿದರೂ ಚೋರ ಗುರು ಚಂಡಾಳ ಶಿಷ್ಯರಂತಿರುವ ಇಬ್ಬರು ಹಿರಿಯ ಕೆಎಚ್ ಬಿ ಅಭಿಯಂತರರು ಕಾಲನಿಗೆ ಉತ್ತಮ ರಸ್ತೆ, ಮೂಲಭೂತ ಸೌಲ್ಯಭಗಳನ್ನು ನೀಡುತ್ತಿಲ್ಲ, ಬದಲಿಗೆ ಬರಿ ‘ನಾಟಕ’ ಮಾಡುತಿದ್ದಾರೆ ವಿನಾಃ ಯಾವುದೇ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ ಎಂದು ಕೆಎಚ್ ಬಿ ಹಿತಾಭಿವೃದ್ಧಿ ಸಂಘದ ಪದಾಧಿಕಾರಿಗಳು ಆರೋಪಿಸಿದ್ದು, ರಸ್ತೆಗಳ ಅಭಿವೃದ್ಧಿ ಕೈಗೊಳ್ಳದ ಅಧಿಕಾರಗಳ ವಿರುದ್ಧ ಜನರು ನಿತ್ಯವೂ ಶಪಿಸುತ್ತಿದ್ದಾರೆ ಎಂದು ಹೇಳಿದರು.
ಕಾಲೋನಿಯಲ್ಲ ಬಹುತೇಕ ಕಡೆಯ ರಸ್ತೆಗಳು ಹಾಳಾಗಿದ್ದು, ಕೆಲ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿದ್ದು, ಇದರಿಂದ ಅವರು ಶಾಶ್ವತ ಅಂಗವಿಕಲರಾಗುವ ಸಾದ್ಯತೆ ಇದ್ದು, ವಾಹನಗಳ ಸಂಚಾರಕ್ಕೆ ಒಳ ರಸ್ತೆಗಳು ಯೋಗ್ಯವಾಗಿಲ್ಲ. ಸದ್ಯ ಸಾರ್ವಜನಿಕರ ಜೀವ ಕಾಪಾಡಲು ಕೆಎಚ್ ಬಿ ಅಧಿಕಾರಗಳು ಕೂಡಲೆ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು ಹಾಗೂ ಬಡಾವಣೆಯನ್ನು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಹಸ್ತಾಂತರಿಸಬೇಕು. ಮತ್ತು ಹುಬ್ಬಳ್ಳಿಯ ಕೆಎಚ್ ಬಿಯ ಭ್ರಷ್ಟ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಬೇಕು ಎಂದು ಕಾಲನಿಯ ಶಂಕರ ಬಡಿಗೇರ ಆಗ್ರಹಿಸಿದ್ದಾರೆ.