Posts Slider

Karnataka Voice

Latest Kannada News

ಯಾರೂ ಒಳಗೆ ಬರದಿದ್ದರೇ ಸೈನಿಕರು ಹುತಾತ್ಮರಾಗಿದ್ದು ಹೇಗೆ: ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ

1 min read
Spread the love

ಬೆಂಗಳೂರು: ಜೂನ್ 15, 16 ರಂದು ಕೆಲವು ಘಟನೆಗಳು ಲಡಾಕ್ ಭಾಗದ ಗಲ್ವಾನ್ ಏರಿಯಾದಲ್ಲಿ ನಡೆದಿದೆ. ಚೀನಾ ಮೋಸದಿಂದ ದಾಳಿ ನಡೆಸಿದೆ. 20ಜನ ನಮ್ಮ ಸೈನಿಕರನ್ನು ಚೀನಾ ಕೊಲೆ ಮಾಡಿದೆ. ಇದನ್ನು ನಾವು ಖಂಡಿಸ್ತೀವಿ ಎಂದು ಕೆಪಿಸಿಸಿ ಕಚೇರಿಯಲ್ಲಿ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಭಾಗಿಯಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಖರ್ಗೆ, ಪ್ರಧಾನಿ ನರೇಂದ್ರ ಮೋದಿ ಸರ್ವ ಪಕ್ಷ ಸಭೆಯನ್ನು ಕರೆದಾಗ ಘಟನೆಯನ್ನು ಎಲ್ಲರೂ ಖಂಡಿಸಿದ್ದಾರೆ. ಚೀನಾ ಯಾವಾಗ್ಲೂ ಕೂಡ ಮೊದಲು ಪ್ರೀತಿ ತೋರಿಸಿ, ಸಭ್ಯತೆಯ ತರ ಆಕ್ಟ್ ಮಾಡಿ ಬೆನ್ನಿಗೆ ಚೂರಿ ಹಾಕೋದನ್ನ ಬಿಡ್ತಿಲ್ಲ. ಹೀಗೆ ಅನೇಕ ಸಲ ಹಾಗಿದೆ. ಇದೇ ಮೊದಲ ಬಾರಿಗೆ 20 ಕೊಲೆಯನ್ನ ಚೀನಾದವರು ಮಾಡಿದ್ದಾರೆ. ಗಡಿಯಲ್ಲಿ ಪೆಟ್ರೋಲಿಂಗ್ ಮಾಡುವಾಗ ಸಾಧಾರಣವಾಗಿ ನಡೆದುಕೊಳ್ಳಬೇಕು ಎಂದರು.

ನಿಯಮವನ್ನ ಚೀನಾ ಪಾಲನೆ ಮಾಡಿಲ್ಲ. ನಮ್ಮ ಮೇಲೆ ದಾಳಿ ಮಾಡಿದಾಗ ನಾವು ಸುಮ್ಮನೆ ಇರಲು ಆಗಲ್ಲ. ನಾವು ಸರ್ಕಾರ, ದೇಶದ ಜನತೆ ಮತ್ತು ಸೈನಿಕರ ಜೊತೆ ಇದ್ದೇವೆ. ದೇಶದ ರಕ್ಷಣೆ ಮಾಡುವ ಸೈನಿಕರಿಗೆ ನಾವು ಪ್ರತಿಯೊಂದು ವಿಚಾರದಲ್ಲಿ ಬೆಂಬಲಕ್ಕೆ ನಿಲ್ಲಬೇಕು. ದೇಶಕ್ಕೆ ಸಂಕಟ, ತೊಂದರೆ ಬಂದಾಗ ಇಡೀ ದೇಶ ಎದ್ದು ನಿಂತಿದೆ. ಚೀನಾ ತನ್ನ ನರಿ ಬುದ್ದಿ ಬಿಡೋದಿಲ್ಲ ಅಂತ ಹಲವು ಪರಿಣಿತರು ಹೇಳಿದ್ದಾರೆ. 15,16 ರಂದು 20 ಸೈನಿಕರು ಬಲಿದಾನ ಮಾಡಿದ್ದಾರೆ ಎಂದು ಬೇಸರವ್ಯಕ್ತಪಡಿಸಿದರು.

ಸರ್ವ ಪಕ್ಷ ಸಭೆಯಲ್ಲಿ ಮೋದಿ ಒಂದು ಮಾತು ಹೇಳಿದ್ರು. ಗಡಿಭಾಗದ ಒಳಗೆ ಯಾರು ಬಂದಿಲ್ಲ, LAC ಯಲ್ಲಿ ಒಂದು ಇಂಚು ಭೂಮಿಯನ್ನ ಯಾರೂ ಪಡೆದಿಲ್ಲ ಎಂದು ಮೋದಿ ಸ್ಪಷ್ಟ ಪಡಿಸಿದ್ದರು. ಪ್ರಧಾನಿ ಒಂದು ಮಾತು ಆಡಿದ್ರೂ ಹೆಚ್ಚು ಮಹತ್ವ ಇರುತ್ತದೆ. ಚೀನಾದವರು ನುಗ್ಗಿಲ್ಲ, ನುಸಿಳಿಲ್ಲ, ಒಳಗೆ ಬಂದಿಲ್ಲ ಅಂತ ಹೇಳಿದ್ದಾರೆ. ಯಾರೂ ಒಳಗೆ ಬರದಿದ್ದರೆ 20ಜನ ಹೇಗೆ ಮೃತಪಟ್ಟರು. ಯಾರೂ ಒಳಗೆ ಬಂದಿಲ್ಲ, ನಾವೂ ಅವರ ಕಡೆ ಹೋಗಿಲ್ಲ. ಹಾಗಿದ್ರೆ ಸೈನಿಕರನ್ನು ಯಾರು ಹೊಡೆದ್ರು. ಹಾಗಿದ್ರೆ ಸೈನಿಕರ ಬಲಿದಾನ ಆಗಿದ್ದು ಹೇಗೆ. ಪ್ರಧಾನಿ ಸತ್ಯ ಬಹಿರಂಗ ಪಡೆಸಬೇಕು ಎಂದು ಆಗ್ರಹಿಸಿದರು.

ದೇಶದ ಮೇಲೆ ದಾಳಿ ಮಾಡಿದಾಗ ಸುಮ್ಮನಿರಲು ಸಾಧ್ಯವೇ. ನಾವು ನಿಮಗೆ ಸಂಪೂರ್ಣ ಬೆಂಬಲ ನೀಡ್ತೇವೆ. ಆದರೆ, ನೀವು ಸತ್ಯವನ್ನ ಮರೆಮಾಡಬೇಡಿ. ಜನರ ಮುಂದೆ ಸತ್ಯವನ್ನ ತೆರೆದಿಡಿ. ಮೋದಿಯವರು ಹೇಳಿದ್ದೇ ಸರಿ ಅನ್ನೋ ಮನೋಭಾವದವರು. ಎಲ್ಲಾ ಮಾಧ್ಯಮಗಳಲ್ಲೂ ಇದರ ಬಗ್ಗೆ ಪ್ರಶ್ನೆ ಎದ್ದಿದೆ. ಇದರ ಬಗ್ಗೆ ಕೇಂದ್ರ ಈಗಲಾದರೂ ಬಾಯಿ ತೆರೆಯಬೇಕು. ರಾಹುಲ್ ಗಾಂಧಿ ಇದರ ಬಗ್ಗೆ ಪ್ರಶ್ನೆಯೆತ್ತಿದ್ದರು. ಇಷ್ಟೆಲ್ಲಾ ಹೇಳಿದರೂ ಕೇಂದ್ರಕ್ಕೆ ಅರ್ಥವಾಗ್ತಿಲ್ಲ. ನಾವೆಲ್ಲ ಸೇರಿ ದೇಶವನ್ನ ಉಳಿಸಬೇಕಿದೆ. ಆದರೆ, ನಾವು ಹೇಳಿದ್ದೇ ಸರಿ ಅಂತ ಮೋದಿ ನಡೆದುಕೊಳ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.


Spread the love

Leave a Reply

Your email address will not be published. Required fields are marked *