ಮತ್ತೊಂದು ದಾಖಲೆ ಬಿಡುಗಡೆ ಮಾಡಿದ ಖಂಡ್ರೆ: ಮುಜುಗರಕ್ಕೆ ಸರಕಾರ

ಬೀದರ: ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೇ ಕೋವಿಡ್ ಸಾಮಗ್ರಿಯಲ್ಲಿ ಅಕ್ರಮ ಎಸಗಿರುವ ಸರಕಾರ ಬೌರಿಂಗ್ ಆಸ್ಪತ್ರೆಯ ನಿರ್ದೇಶಕರನ್ನ ಆರು ವಾರಗಳ ಕಾಲ ರಜೆಗೆ ಕಳಿಸಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮೂಲಕ ಈಶ್ವರ ಖಂಡ್ರೇ, ಕೋವಿಡ್ ಸಮಸ್ಯೆಯಿರುವಾಗಲೇ ನಿರ್ದೇಶಕರನ್ನ ರಜೆಗೆ ಕಳಿಸಿದ್ದು ಯಾಕೆ..? ಏಕಾಏಕಿ ನಿರ್ದೇಶಕರನ್ನ ಬದಲಾಯಿಸುವುದು ಏಕೆ..? ಇದರ ಹಿಂದೆ ಯಾರ ಹಿತಾಸಕ್ತಿ ಇದೇ ಸ್ವಾಮಿ.. ? ರಾಜ್ಯದ ಜನರು ಪ್ರಶ್ನೆ ಮಾಡುತ್ತಿದ್ದಾರೆ..!
ಆಸ್ಪತ್ರೆಗೆ ಸಂಬಂಧವೇ ಇಲ್ಲದವರನ್ನ ನಿರ್ದೇಶಕರನ್ನಾಗಿಸೋ ಪ್ರಯತ್ನ ನಡೀತಾಯಿದೆ. ಸ್ವತಃ ಬೌರಿಂಗ್ ಆಸ್ಪತ್ರೆ ವೈಧ್ಯರೇ ಸಚಿವರಿಗೆ ಪತ್ರ ಬರೆದು ಪ್ರಶ್ನಿಸಿದ್ದಾರೆ. ಸಚಿವ ಸುಧಾಕರ ಅವರೇ ನಿಮ್ಮ ಮುಗಿನ ಕೆಳಗೆ ಎಲ್ಲಾ ನಡೀತಾಯಿದ್ದರೂ ಏಕೆ ಸುಮ್ಮನಿದ್ದೀರಿ.. ಉತ್ತರಿಸಿ ಎಂದು ಖಂಡ್ರೇ ಆಗ್ರಹಿಸಿದ್ದಾರೆ.