Posts Slider

Karnataka Voice

Latest Kannada News

ಕೆಜಿಎಫ್-2 ಸಿನೇಮಾ ನೋಡುತ್ತಿದ್ದಾಗಲೇ “ಹೊಟ್ಟೆಗೆ ಶೂಟ್”- ಹುಬ್ಬಳ್ಳಿ ಕಿಮ್ಸನಲ್ಲಿ ಸಾವು-ಬದುಕಿನ ನಡುವೆ ಹೋರಾಟ…

Spread the love

ಹುಬ್ಬಳ್ಳಿ: ಚಿತ್ರರಂಗದಲ್ಲಿ ದಿನಕ್ಕೊಂದು ದಾಖಲೆ ಬರೆಯುತ್ತಿರೋ ಕೆಜಿಎಫ್-2 ಸಿನೇಮಾ ನೋಡುತ್ತಿದ್ದಾಗಲೇ ಪ್ರೇಕ್ಷಕನೋರ್ವ ಮತ್ತೋರ್ವ ಪ್ರೇಕ್ಷಕನಿಗೆ ಗುಂಡು ಹಾರಿಸಿರುವ ಪ್ರಕರಣ ಶಿಗ್ಗಾಂವಿಯ ರಾಜೇಶ್ವರಿ ಥೇಟರನಲ್ಲಿ ಸಂಭವಿಸಿದ್ದು, ಪ್ರೇಕ್ಷಕ ಸಾವು ಬದುಕಿನ ನಡುವೆ ಹುಬ್ಬಳ್ಳಿ ಕಿಮ್ಸನಲ್ಲಿ ಹೋರಾಟ ನಡೆಸುತ್ತಿದ್ದಾನೆ.

ವವಸಂತಕುಮಾರ ಎಂಬ ಯುವಕನನ್ನ ಕಿಮ್ಸಗೆ ದಾಖಲು ಮಾಡಲಾಗಿದ್ದು, ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆಯನ್ನ ಮುಂದುವರೆಸಲಾಗಿದೆ.

ಕೆಜಿಫ್ -2 ಸಿನಿಮಾ ನೋಡವ ಸಮಯದಲ್ಲಿ ಶೂಟೌಟ್ 

ಹಾವೇರಿ : ಶಿಗ್ಗಾವಿ ಪಟ್ಟಣದಲ್ಲಿ ಮಂಗಳವಾರ ರಾತ್ರಿ 10.30 ರ ಸಮಯದಲ್ಲಿ ರಾಜಶ್ರೀ ಚಿತ್ರಮಂದಿರದಲ್ಲಿ ‘ಕೆಜಿಫ್-೨’ ನೋಡುವ ಸಂರ್ದಭದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಪ್ರೇಕ್ಷಕರಿಬ್ಬರ ನಡುವೆ ಜಗಳ ನಡೆದು ಪಿಸ್ತೂಲಿನಿಂದ ಗುಂಡು ಹೊಡೆದಿರುವ ಘಟನೆ ನಡೆದಿದೆ .

ಶಿಗ್ಗಾವಿ ತಾಲ್ಲೂಕಿನ ಮುಗಳಿ ಗ್ರಾಮದ ವಸಂತಕುಮಾರ ಸಣ್ಣಕಲ್ಲಪ್ಪ ಶಿವಪುರ (28) ಗುಂಡೇಟು ತಿಂದು ಗಾಯಗೊಂಡ ಪ್ರೇಕ್ಷಕ , ಗಂಭೀರವಾಗಿ ಗಾಯಗೊಂಡಿರುವ ಇವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ . 

ಗುಂಡು ಹಾರಿಸಿ ಆರೋಪಿ ಪರಾರಿಯಾಗಿದ್ದಾನೆ, ಆರೋಪಿ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ. ಘಟನಾ ಸ್ಥಳಕ್ಕೆ ಶಿಗ್ಗಾವಿ ಪಟ್ಟಣದ ಪೊಲೀಸರು ಭೇಟಿ ನೀಡಿ, ತನಿಖೆಯನ್ನು ಕೈಗೊಂಡಿದ್ದಾರೆ.

೨-೩ ಗುಂಡುಗಳು ನೇರವಾಗಿ ಹೊಟ್ಟೆಗೆ  : ವಸಂತಕುಮಾರ ಶಿವಪುರ 

ಸಿನಿಮಾ ನೋಡುವ ಸಂದರ್ಭದಲ್ಲಿ ಮುಂದಿನ ಕುರ್ಚಿಯ ಮೇಲೆ ವಸಂತಕುಮಾರ ಶಿವಪುರ ಕಾಲಿಟ್ಟಿದ್ದ ಎಂಬ ಕಾರಣಕ್ಕೆ ಮುಂದಿನ ಕುರ್ಚಿಯಲ್ಲಿದ್ದ ವ್ಯಕ್ತಿ ತೆಗೆಯುವಂತೆ ಹೇಳಿದ್ದಾನೆ. ಈ ಸಂದರ್ಭದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ಉಂಟಾಗಿದ್ದು,ಇಬ್ಬರು ಜಗಳಮಾಡಿದ್ದಾರೆ. 

     ನಂತರ ಮುಂದಿನ ಕುರ್ಚಿಯ ವ್ಯಕ್ತಿ ಹೊರಗಡೆ ಹೋಗಿ ಹತ್ತು ನಿಮಿಷ ನಂತರ ಮತ್ತೆ ಚಿತ್ರಮಂದಿರ ಒಳಗೆ ಬಂದು, ವಸಂತಕುಮಾರನ ಮೇಲೆ ಆರೋಪಿ ಪಿಸ್ತೂಲಿನಿಂದಮೂರು ಸುತ್ತು ಗುಂಡು ಹಾರಿದಿದ್ದಾನೆ. ಎರಡು ಗುಂಡುಗಳು ನೇರವಾಗಿ ಹೊಟ್ಟೆಗೆ ತಗಲಿದ್ದು ,ಆರೋಪಿಯ ಮೂರನೇ ಗುಂಡು ಗುರಿ ತಪ್ಪಿ ಹೋಗಿದೆ.   

ವಸಂತಕುಮಾರ ಪ್ರಾಣಾಪಾಯದಿಂದ ಪಾರು  

ಹುಬ್ಬಳ್ಳಿ : ಶಿಗ್ಗಾವಿ ಚಿತ್ರಮಂದಿರದಲ್ಲಿ ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡ ವಸಂತಕುಮಾರ ಶಿವಪುರ ಆತನನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಸ್ತ್ರಚಿಕಿತ್ಸೆಗೆ ಒಳಪಡಿಸಿ ಗುಂಡುಗಳನ್ನು ಹೊರಗೆ ತೆಗೆಯಲಾಗಿದೆ. 

   ವಸಂತಕುಮಾರ ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಕಿಮ್ಸ್ ಆಸ್ಪತ್ರೆ ಮೂಲಗಳು ತಿಳಿಸಿವೆ.  

ಹಾವೇರಿ ಬ್ರೇಕಿಂಗ್…..

ಚಲನಚಿತ್ರ ವೀಕ್ಷಣೆ ವೇಳೆ ಹಾರಿದ ಗುಂಡು.

ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದ ರಾಜೇಶ್ವರಿ ಚಿತ್ರಮಂದಿರದಲ್ಲಿ ಘಟನೆ.

ವಸಂತಕುಮಾರ ಎಂಬ ಯುವಕನಿಗೆ ತಗುಲಿದ ಗುಂಡು.

ಯುವಕನ ಹೊಟ್ಟೆಯ ಭಾಗಕ್ಕೆ ತಗುಲಿದ ಗುಂಡು.

ಕೆಜಿಎಫ್ 2 ಚಿತ್ರ ವೀಕ್ಷಣೆ ವೇಳೆ ಘಟನೆ.

ಗಾಯಾಳುವಿಗೆ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ.

ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನೆ.

ಚಿತ್ರಮಂದಿರದಲ್ಲಿ ಗುಂಡು ಹಾರಿರುವುದನ್ನು ಖಚಿತಪಡಿಸಿದ ಎಸ್ಪಿ ಹನುಮಂತರಾಯ.

ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳ ದೌಡು, ಪರಿಶೀಲನೆ.

ಶಿಗ್ಗಾಂವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ.


Spread the love

Leave a Reply

Your email address will not be published. Required fields are marked *