ಕೇಶ್ವಾಪುರದಲ್ಲಿನ ಎರಡು ಎಕರೆ ಜಮೀನು ಹತ್ತೆ ಲಕ್ಷಕ್ಕೆ ಮಾರಾಟ: ಮೂರುಸಾವಿರ ಮಠದ ಒಳವ್ಯವಹಾರ

ಹುಬ್ಬಳ್ಳಿ: ಪ್ರತಿಷ್ಠಿತ ಮೂರುಸಾವಿರ ಮಠದ ಹೆಸರಿನಲ್ಲಿದ್ದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಕೇಶ್ವಾಪುರ ಸರಹದ್ದಿನಲ್ಲಿದ್ದ ಎರಡು ಎಕರೆ ಖುಷ್ಕಿ ಭೂಮಿಯನ್ನ ಹತ್ತು ಲಕ್ಷ ರೂಪಾಯಿಗೆ ಶಿವಮೊಗ್ಗ ಮೂಲದ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿರುವ ಪ್ರಕರಣವನ್ನ ಮೂರುಸಾವಿರ ಮಠದ ಭಕ್ತ ಸಮೂಹ ಹೊರ ಹಾಕಿದೆ.
ಹುಬ್ಬಳ್ಳಿಯಲ್ಲಿಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಮಾಜದ ಭಕ್ತರು, ವಕೀಲರಾದ ಎಸ್.ಆರ್.ಪಾಟೀಲ ಮಾತನಾಡಿದರು. ಸೆಪ್ಟೆಂಬರ್ 27, 2012ರಂದು ಖರೀದಿ ಕೊಡಲಾಗಿದೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ನಿವಾಸಿ ಮಲ್ಲಿಕಾರ್ಜುನ ಎನ್.ಎಚ್ ಎನ್ನುವವರಿಗೆ ಹತ್ತೇ ಲಕ್ಷ ರೂಪಾಯಿಗೆ ಮಾರಾಟ ಮಾಡಲಾಗಿದೆ. ವ್ಯವಹಾರಕ್ಕೆ ಸಂಬಂಧಿಸಿದಂತೆ ಐದೈದು ಲಕ್ಷದ ಹಣವನ್ನ ಡಿಡಿ ಮೂಲಕ ಪಡೆಯಲಾಗಿದೆ. ಡಿಡಿ ನಂಬರ 680733 ಮತ್ತು 680734 ಎಂದು ಖರೀದಿ ಕಾಗದ ಪತ್ರದಲ್ಲಿ ನಮೂದು ಮಾಡಲಾಗಿದೆ.
ಈ ಖರೀದಿ ಕಾಗದ ಪತ್ರಕ್ಕೆ ಹುಬ್ಬಳ್ಳಿ ವಿದ್ಯಾನಗರದ ಡಿ.ಸಂಗಪ್ಪ, ಗದಗ ಮುಳಗುಂದ ನಾಕಾದ ಎಂ.ಜಿ.ಕೋಟಿ ಹಾಗೂ ಹುಬ್ಬಳ್ಳಿ ವಿಶ್ವೇಶ್ವರನಗರದ ಆರ್.ಟಿ.ಮಜ್ಜಗಿ ಸಾಕ್ಷಿದಾರರಾಗಿ ಸಹಿ ಹಾಕಿದ್ದಾರೆ. ಪಾಲಿಕೆ ವ್ಯಾಪ್ತಿಯ ಎರಡು ಎಕರೆ ಜಮೀನು ಮಾರಾಟದ ಬಗ್ಗೆ ಮಾಹಿತಿಯನ್ನ ವಕೀಲರಾದ ಎಸ್.ಆರ್.ಪಾಟೀಲ ಮಾಹಿತಿಯನ್ನ ನೀಡಿದರು.
ಇದೇ ವಿಷಯವನ್ನ ಮೂರುಸಾವಿರ ಮಠದ ಉತ್ತರಾಧಿಕಾರಿ ಶ್ರೀ ದಿಂಗಾಲೇಶ್ವರ ಮಹಾಸ್ಬಾಮಿಗಳು ಹೊರಗೆ ಹಾಕಿದ್ದಾರೆ.
ಮೊನ್ನೆ ಕೆಎಲ್ಇ ಮೆಡಿಕಲ್ ಕಾಲೇಜ್ ಭೂಮಿಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮೂರುಸಾವಿರ ಮಠದ ಶ್ರೀ ಗುರುಶಿದ್ಧ ರಾಜಯೋಗಿಂದ್ರ ಮಹಾಸ್ವಾಮಿಗಳು, ನಾನು ವಯಕ್ತಿಕ ಮಾರಾಟ ಮಾಡಿದ್ದೇನೆಯೇ ಎಂದು ಪ್ರಶ್ನಿಸಿ, ತಾವೇನು ಮಾಡಿಯೇ ಇಲ್ಲವೆಂದು ತೋರಿಸೋ ಪ್ರಯತ್ನ ಮಾಡಿದ್ರು.
ಇದೀಗ ದಾಖಲೆ ಸಮೇತ ಭೂಮಿ ಮಾರಾಟ ಪ್ರಕರಣ ಹೊರಗೆ ಬಂದಿರೋದ್ರಿಂದ ಹಾಲಿ ಶ್ರೀಗಳು ಏನು ಹೇಳುತ್ತಾರೆಂಬುದು ಇದೀಗ ಕೌತುಕ ಮೂಡಿಸಿದೆ.