ನೋಡಿ.. ದಯವಿಟ್ಟು ಕಣ್ಣೀರಾಗಬೇಡಿ..!

ಹಾವೇರಿ: ಇಂತಹದನ್ನ ಯಾರೂ ನೋಡಲು ಬಯಸುವುದೇ ಇಲ್ಲ. ಆದರೂ, ನಡೆದು ಹೋಗಿ ಬಿಡತ್ತೆ. ಬದುಕು ಮೂರೋತ್ತು ಉಸಿರಾಟದಲ್ಲಿ ಸಾಗುತ್ತಿರುವಾಗಲೇ, ಉಸಿರು ನಿಲ್ಲಿಸುವ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ಅಂತಹ ಧಾರುಣ ಘಟನೆಗೆ ಹಾವೇರಿ ಜಿಲ್ಲೆಯ ಸವಣೂರ ತಾಲೂಕಿನ ಹೊರವಲಯದ ಇಸ್ಲಾಂಪೂರದ ಹತ್ತಿರ ನಡೆದಿದೆ.
ಇಂದು ಬೆಳಿಗ್ಗೆ ಇಸ್ಲಾಂಪೂರದ ಕೆರೆಯಲ್ಲಿ ಮಗುವೊಂದು ತಾಯಿಯ ಹೊಟ್ಟೆಯಲ್ಲಿ ಮಲಗಿದ ಹಾಗೇ ಜೀವವನ್ನ ಬಿಟ್ಟಿದೆ. ಇದನ್ನ ತಂದು ಇಲ್ಲಿ ಹಾಕಿದ್ದು ಯಾವ ತಾಯಿಯೋ ಏನೋ. ಮಗು ಮಾತ್ರ ಹುಟ್ಟಿದಂದೇ ಪ್ರಾಣ ಬಿಟ್ಟಿರುವ ಹಾಗಿದೆ.
ಉಸಿರಾಡಲು ಹೊರಗೆ ಬಂದ ಮಗುವನ್ನ ಉಸಿರಿಲ್ಲದ ಹಾಗೇ ಮಾಡಿ ಕೆರೆಯಲ್ಲಿ ಒಗೆದು ಹೋಗಿರಬಹುದೆಂದು ಶಂಕಿಸಲಾಗಿದ್ದು, ಸ್ಥಳಕ್ಕೆ ಸಿಡಿಪಿಒ ಅಣ್ಣಪ್ಪ ಹೆಗೆಡೆ ಪೊಲೀಸರೊಂದಿಗೆ ಆಗಮಿಸಿ, ಪರಿಶೀಲನೆ ನಡೆಸಿ, ಮೃತ ದೇಹವನ್ನ ಪುರಸಭೆ ಪೌರ ಕಾರ್ಮಿಕರಿಂದ ಹೊರಗೆ ತೆಗೆಸಿದ್ದಾರೆ.
ಮಕ್ಕಳಿರಲಿ ಮನೆ ತುಂಬ ಎಂಬ ಮಾತನ್ನ ಮೀರಿ, ಮದುವೆಯಾಗುವ ಮುನ್ನವೇ ಮಕ್ಕಳು ಮಾಡುವ ಹೆಣ್ಣು ಮಕ್ಕಳು, ತನ್ನ ದಾರಿಯನ್ನ ಸುಗಮ ಮಾಡಿಕೊಳ್ಳಲು, ತನ್ನ ಕರುಳನ್ನೇ ಕಿವುಚಿ ಹೋಗುವ ಘಟನೆ ಇದಾಗಿದ್ದು, ಸವಣೂರು ಠಾಣೆ ಪೊಲೀಸರು ಇದರ ಹಿನ್ನೆಲೆಯಲ್ಲಿರುವರನ್ನ ಪತ್ತೆ ಹಚ್ಚುವಲ್ಲಿ ನಿರತರಾಗಿದ್ದಾರೆ.