ಪ್ರಧಾನಿ ಮೋದಿಗೆ ಕರ್ನಾಟಕದಿಂದಲೇ ಮಹಾ ಮೋಸ: ಕೆರೆ ಕಾಮೇಗೌಡರದ್ದು ಸುಳ್ಳಿನ ಕಂತೆ…?
ಬೆಂಗಳೂರು: ಮಂಡ್ಯದ ಡ್ರೋಣ ಪ್ರತಾಪನ ಸುಳ್ಳಿನ ಸರಮಾಲೆ ಹೊರಬೀಳುತ್ತಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಹೊಗಳಿದ್ದ ಮಂಡ್ಯದ ಕೆರೆ ಕಾಮೇಗೌಡರ ಬಗ್ಗೆ ಸಂಶಯಗಳು ಶುರುವಾಗಿದ್ದು, ಅವರೂರಿನವರೇ ಕಾಮೇಗೌಡರ ಸಮಾಜ ಸೇವೆಯನ್ನ ಹುಡುಕಿ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ‘ಮನ್ ಕೀ ಬಾತ್’ನಲ್ಲಿ ಕೆರೆ ಕಾಮೇಗೌಡರನ್ನ ಹೊಗಳಿದ್ದರೂ, ಅಷ್ಟೇ ಅಲ್ಲ, ಹದಿನಾರು ಕೆರೆಗಳನ್ನ ನಿರ್ಮಾಣ ಮಾಡಿ ಜನಪರ ಕಾಳಜಿಯನ್ನ ತೋರಿಸಿದ್ದಾರೆಂದು ಹೇಳಿದ್ದರು. ಆದರೆ, ಅಸಲಿಯತ್ತೇ ಬೇರೆಯಿದೆ ಅಂತಾರೆ ಸ್ಥಳೀಯರು.
ಈ ಹಿಂದೆ ಅಂದ್ರೇ, 2018ರ ಜುಲೈನಲ್ಲಿ ಸಂದರ್ಶನ ನೀಡಿ ಕುಂದೂರು ಬೆಟ್ಟದಲ್ಲಿ ಏಳು ಕೆರೆಗಳನ್ನ ಪ್ರಾಣಿಪಕ್ಷಿಗಳಿಗಾಗಿ ನಿರ್ಮಾಣ ಮಾಡಿದ್ದಾಗಿ ಹೇಳಿಕೊಂಡಿದ್ದರು.
ಆದರೆ, ಅದೇಲ್ಲ ಸುಳ್ಳು ಬೇಕಿದ್ದರೇ ನೀವೇ ಬಂದು ಪರಿಶೀಲನೆ ನಡೆಸಿ. ಕೆರೆ ಕಾಮೇಗೌಡರು ಸರಕಾರದ ಜಾಗವನ್ನೇ ಕಬಳಿಕೆ ಮಾಡಿಕೊಂಡಿದ್ದಾರೆಂದು ದಾಸನದೊಡ್ಡಿ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.
ಈ ಮೂಲಕ ಪ್ರಧಾನಿಗೆ ಕರ್ನಾಟಕದಿಂದ ಸುಳ್ಳು ಮಾಹಿತಿ ನೀಡಿ ಮೋಸ ಮಾಡಲಾಗಿದೆಯಂದು ಹೇಳಲಾಗುತ್ತಿದೆ.