ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಎಫ್‌ಐಆರ್

ಕೇರಳ: ಕೇರಳ ರಾಜ್ಯ ಮತ್ತೊಂದು ಕಾಶ್ಮೀರ ಆಗುವತ್ತ ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತಿದೆ ಎಂದು ಹೇಳಿಕೆ ನೀಡಿದ್ದ ಬೆನ್ನಲ್ಲೇ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಕೇರಳ ಸರಕಾರ ಎಫ್‌ಆರ್‌ಐ ದಾಖಲಿಸಿದೆ.
ಕೇರಳದ ಚೇರಕುನ್ನು ದಲಿತ ಕುಟುಂಬಸ್ಥರಿಗಾದ ಅನ್ಯಾಯದ ವಿರುದ್ಧ ಕ್ರಮ ಕೈಗೊಳ್ಳುವ ಬದಲು, ಅವರು ನನ್ನ ಮೇಲೆ ಕೇಸ್ ಹಾಕಿದ್ದಾರೆ. ಕಾರ್ಯನಿರ್ವಹಿಸದ, ಪಕ್ಷಪಾತಿ ಮಾಡುವ ಸರಕಾರದ ವಿರುದ್ಧ ಸಮಾಜ ಒಂದಾಗಲು ಇದು ಸಕಾಲ” ಎಂದು ಶೋಭಾ ಕರಂದ್ಲಾಜೆ ಟ್ವಿಟ್ ಮಾಡಿದ್ದಾರೆ.