ಬೃಹತ್ ಪುತ್ಥಳಿ ನಿರ್ಮಾಣಕ್ಕೆ ಮುನ್ನುಡಿ ಬರೆದ ಬಜೆಟ್: 325 ಅಡಿ ಬಸವಣ್ಣ, 100ಅಡಿ ಕೆಂಪೇಗೌಡ ಪುತ್ಥಳಿಗೆ ಆಧ್ಯತೆ

ಬೆಂಗಳೂರು: ರಾಜ್ಯದಲ್ಲಿಯೂ ಬೃಹದಾಕಾರದ ಪ್ರತಿಮೆಗಳನ್ನ ನಿರ್ಮಾಣ ಮಾಡಲು ರಾಜ್ಯ ಸರಕಾರ ಕೋಟಿ ಕೋಟಿ ಹಣವನ್ನ ಮೀಸಲಿರಿಸಿದ್ದು, ರಾಜ್ಯದ ಕೀರ್ತಿಯೂ ಪ್ರತಿಮೆಗಳ ಮೂಲಕವೂ ಹೆಚ್ಚಾಗಲಿದೆ.
ನಾಡಫ್ರಭು ಕೆಂಪೇಗೌಡರ 100 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನ ಬೆಂಗಳೂರು ಅಂರತಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಿರ್ಮಿಸಲು 66 ಕೋಟಿ ರೂಪಾಯಿಯನ್ನ ವೆಚ್ಚ ಮಾಡಲು ಸರಕಾರ ನಿರ್ಧರಿಸಿದೆ. ಚಿತ್ರದುರ್ಗ ಜಿಲ್ಲೆಯ ಮುರುಘಾಮಠದ ಆವರಣದಲ್ಲಿ 325 ಅಡಿ ಎತ್ತರದ ಬಸವೇಶ್ವರ ಕಂಚಿನ ಪುತ್ಥಳಿ ನಿರ್ಮಾಣಕ್ಕೆ 20 ಕೋಟಿ ರೂಪಾಯಿ ನೆರವು ನೀಡಲು ಸರಕಾರ ಮುಂದಾಗಿದೆ.