ಶಹಬ್ಬಾಶ್ ಕೇಜ್ರಿವಾಲ್: ಆಟೋ ಚಾಲಕರಿಗೆ ಬಂಪರ್ ಕೊಡುಗೆ
1 min readನವದೆಹಲಿ: ಕೊವೀಡ್-19 ಎದುರಿಸಲು ಸಜ್ಜಾಗಿರುವ ದೇಶಕ್ಕೆ ನವದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮಾದರಿಯ ನಿರ್ಣಯ ತೆಗೆದುಕೊಂಡಿದ್ದು, ಬಡವರನ್ನ ಬದುಕಿಸಲು ಯೋಜನೆಯನ್ನ ಜಾರಿಗೆ ತಂದಿದ್ದಾರೆ.
ಮಾನವೀಯತೆಯ ಸಾಕಾರಮೂರ್ತಿಯಂತೆ ಕಾರ್ಯನಿರ್ವಹಣೆ ಮಾಡುತ್ತಿರುವ ಅರವಿಂದ ಕೇಜ್ರಿವಾಲ್ ಆಟೋ ಚಾಲಕರಿಗೆ ಮತ್ತು ಗ್ರಾಮೀಣ ಪ್ರದೇಶದಲ್ಲಿನ ಟಂಟಂ ಚಾಲಕರಿಗೆ ಮಾಸಿಕ 5ಸಾವಿರ ರೂಪಾಯಿ ಕೊಡಲು ಮುಂದಾಗಿದ್ದಾರೆ. ಮೂರು ತಿಂಗಳವರೆಗೆ 71ಲಕ್ಷ ಜನರು ಇದರ ಉಪಯೋಗ ಪಡೆಯಲಿದ್ದಾರೆ. ವೈರಸ್ ಹರಡುವಿಕೆಯಿಂದ ಬದುಕಿಗಾಗಿ ಹೋರಾಟ ಮಾಡಬೇಕಾದವರ ಪಾಲಿಗೆ ಅರವಿಂದ ಕೇಜ್ರಿವಾಲ್ ಅವರ ನಿರ್ಣಯ, ಜನರನ್ನ ಮಂತ್ರಮುಗ್ಧರನ್ನಾಗಿಸಿದೆ.