ಕಿಟೆಲ್ ಕಡೆ ಬಂದು ರಿಪೇರಿ ಮಾಡಿದ್ರಂತೆ..! ನೀವೂ ಅರಾಮಾಗಿ ಹೋಗಬಹುದು..!
ಧಾರವಾಡ: ಒಂದು ಗಂಟೆಯ ಹಿಂದಷ್ಟೇ ವಿದ್ಯುತ್ ಕಂಬದಲ್ಲಿ ಬೆಂಕಿಯುಂಡೆ ಬೀಳುತ್ತಿದೆ ಎಂದು ವೀಡಿಯೋ ಸಮೇತ ವಿವರಿಸಲಾಗಿತ್ತು. ಇದೀಗ ಹೆಸ್ಕಾಂನವರು ಬಂದು ದುರಸ್ತಿ ಮಾಡಿ ಹೋಗಿದ್ದಾರಂತೆ. ಪ್ರಯಾಣಿಕರು ಅರಾಮಾಗಿ ಈ ಭಾಗದಲ್ಲಿ ಸಂಚಾರ ಮಾಡಬಹುದು..
ಕೆಲ ಸಮಯದ ಹಿಂದೆ ಪ್ರಕಟವಾದದ್ದು
ಧಾರವಾಡ: ಕಿಟೆಲ್ ಕಾಲೇಜ ಬಳಿ ಬೆಂಕಿಯುಂಡೆ- ಹೌಹಾರಿದ ಸಂಚಾರಿಗಳು.. ನೀವೂ ಎಲ್ಲಿದ್ದೀರಿ.. ಹುಷಾರು..!
ಧಾರವಾಡ: ನಿರಂತರವಾಗಿ ಮಳೆ ಸುರಿಯುತ್ತಿರುವ ಸಮಯದಲ್ಲೇ ವಿದ್ಯುತ್ ಶಾಕ್ ಸರ್ಕೀಟ್ ನಿಂದ ಬೆಂಕಿ ಕಿಡಿಗಳು ರಸ್ತೆಯುದ್ದಕ್ಕೂ ಬೀಳುತ್ತಿದ್ದು, ಸಾರ್ವಜನಿಕರು ಆತಂಕದಿಂದ ಸಂಚರಿಸುವ ಸ್ಥಿತಿ ಕಿಟೆಲ್ ಕಾಲೇಜು ಬಳಿ ನಡೆಯುತ್ತಿದೆ.
ವಿದ್ಯುತ್ ಕಂಬದ ಬಳಿ ತಂತಿಗಳು ಕೂಡಿಕೊಂಡು ಬೆಂಕಿ ಕಿಡಿಗಳು ಬೀಳುತ್ತಿವೆ. ಅತೀಯಾಗಿ ಬೆಂಕಿ ಬೀಳುತ್ತಿರುವುದು ಇಲ್ಲಿಂದ ಸಂಚರಿಸುವವರು ಭಯದಿಂದ ಹೋಗುವ ಸ್ಥಿತಿ ನಿರ್ಮಾಣವಾಗಿದೆ.
ಮಳೆಗಾಲದಲ್ಲಿ ಈ ಘಟನೆಯನ್ನ ಹೆಸ್ಕಾಂದವರು ನೋಡಬೇಕಿದೆ. ಇಲ್ಲದಿದ್ದರೇ ಸ್ಥಳೀಯರಿಗೆ ತೊಂದರೆಯಾಗುವುದು ನಿಶ್ಚಿತ. ಕಿಟೆಲ್ ಕಾಲೇಜಿನ ರಸ್ತೆಯಲ್ಲಿ ಈಗ ಇಂತಹ ಘಟನೆ ನಡೆಯುತ್ತಿದ್ದು,
ಇದನ್ನ ತಕ್ಷಣವೇ ಸುಧಾರಿಸುವ ಪ್ರಯತ್ನವನ್ನ ಸಿಬ್ಬಂದಿಗಳು ಮಾಡಬೇಕಿದೆ.