ಥ್ಯಾಂಕ್ಸ್ ಕೆಇಬಿ: ಭಯದಲ್ಲಿದ್ದವರಿಗೆ ನೆಮ್ಮದಿ ನೀಡಿದ್ದು ಹೇಗೆ ಗೊತ್ತಾ..
ಧಾರವಾಡ: ಆ ಪ್ರದೇಶದ ಜನರು ಮನೆಯ ಮೇಲೆ ಹೋಗಲು ಹೆದರುತ್ತಿದ್ದರು. ಮಕ್ಕಳು ಮನೆಯ ಮೇಲೆ ಹೋದರಂತೂ ಪಾಲಕರ ಜೀವವೇ ಹೋದಂತಾಗುತ್ತಿತ್ತು. ಅದಕ್ಕೇಲ್ಲ ಕಾರಣವಾಗಿದ್ದು, ಮನೆಯ ಮೇಲೆಯೇ ಹಾಯ್ದು ಹೋಗಿದ್ದ ವಿದ್ಯುತ್ ತಂತಿಗಳು.
ಇದೇಲ್ಲ ನಡೆದದ್ದು ಎತ್ತಿನಗುಡ್ಡ ರಸ್ತೆಯ ಹಾಶ್ಮೀನಗರದ 1ನೇ ಕ್ರಾಸ್ ನಲ್ಲಿ. ಇಲ್ಲಿನ ನಿವಾಸಿಗಳು ಪ್ರತಿ ದಿನವೂ ವಿದ್ಯುತ್ ಸಮಸ್ಯೆಯಿಂದ ಕಂಗಲಾಗಿದ್ದರು. ಪ್ರತಿಕ್ಷಣದ ತೊಂದರೆಯನ್ನ ಅನುಭವಿಸಿ, ಅನುಭವಿಸಿ ಸಾಕಾಗಿದ್ದ ನಿವಾಸಿಗಳಿಗೆ ಬೇರೆ ದಾರಿ ತೋಚದೇ ಕೆಇಬಿ ಅಧಿಕಾರಿಗಳಿಗೆ ದೂರು ನೀಡಿದ್ದರು.
ಜನರ ತೊಂದರೆಯನ್ನ ಆಲಿಸಿ ತಕ್ಷಣವೇ ಕ್ರಮ ತೆಗೆದುಕೊಂಡ ಅಧಿಕಾರಿಗಳು, ಮೊದಲು ತೊಂದರೆಯ ಪ್ರದೇಶವನ್ನ ಅವಲೋಕನ ಮಾಡಿ, ಎಂಟೇ ದಿನದಲ್ಲಿ ಇಡೀ ಪ್ರದೇಶದ ಸಮಸ್ಯೆಯನ್ನ ತೊಡೆದು ಹಾಕಿದ್ದಾರೆ.
ಇಲಾಖೆಯ ಎಕ್ಸಿಕ್ಯೂಟಿವ್ ಇಂಜಿನಿಯರ್ ಕಳಕಪ್ಪ ಪಾಗಿ, AEE ದೇವರಾಜ ಹೆಗಡೆ , ಸೆಕ್ಷನ್ ಆಫೀಸರ್ ಗೊವಿಂದ್ ನಾಯಕ್ ತೀವ್ರಗತಿಯಲ್ಲಿ ಸ್ಪಂದಿಸಿದ್ದು, ಗೋವಿಂದ ನಾಯಕರ ನೇತೃತ್ವದಲ್ಲಿ ಸಿಬ್ಬಂದಿ ಶಿವಾನಂದ ಪಟ್ಟಶೆಟ್ಟಿ ಅವರ ತಂಡ ಉತ್ತಮ ಕಾರ್ಯನಿರ್ವಹಣೆ ಮಾಡಿದ್ದಾರೆ.
ಹಾಶ್ಮೀನಗರದ ಬಶೀರ ಕಿತ್ತೂರು, ಮಾಬೂಲಿ ಹಾವೇರಿಪೇಟೆ ಸೇರಿದಂತೆ ಅಧಿಕಾರಿಗಳ ಕಾರ್ಯಕ್ಷಮತೆಯನ್ನ ಕೊಂಡಾಡಿ, ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದ್ದಾರೆ.