ಹುಬ್ಬಳ್ಳಿ ಕೆಬಿನಗರದಲ್ಲಿ ತಲ್ವಾರ, ಕೊಡಲಿ ಬಿಟ್ಟು ಪರಾರಿಯಾದ ಶ್ರೀನಿವಾಸ ವೀರಾಪೂರ
1 min readಹುಬ್ಬಳ್ಳಿ: ಯಾವುದೋ ಅಪರಾಧ ಪ್ರಕರಣ ಮಾಡುವ ಉದ್ದೇಶದಿಂದ ಹುಬ್ಬಳ್ಳಿ ಸೆಟ್ಲಮೆಂಟಿನ ಕೆ.ಬಿ.ನಗರದ 6ನೇ ಕ್ರಾಸ್ ಬಳಿಯ ಮನೆಯಲ್ಲಿಂದ ಅಪಾಯಕಾರಿ ಮಾರಕ ಆಯುಧಗಳನ್ನ ಬಿಟ್ಟು ಆರೋಪಿಯೋರ್ವ ಪರಾರಿಯಾದ ಘಟನೆ ನಡೆದಿದೆ.
ಎರಡು ಹರಿತವಾದ ಲಾಂಗುಗಳು ಹಾಗೂ ಒಂದು ಹರಿತವಾದ ಕೊಡಲಿಯನ್ನ ಬಿಟ್ಟು ಪರಾರಿಯಾಗಿರುವಾತ ಶ್ರೀನಿವಾಸ ತಿರುಪತಿ ವೀರಾಪೂರ ಎಂದು ಗುರುತಿಸಲಾಗಿದೆ. ಬಿಟ್ಟು ಹೋಗಿರುವ ಆಯುಧಗಳನ್ನ ವಶಕ್ಕೆ ಪಡೆಯುವಲ್ಲಿ ಪೊಲೀಸರು ಬೆಂಡಿಗೇರಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿಯಾಗಿರುವ ರೌಡಿ ಷೀಟರ್ ಶ್ರೀನಿವಾಸ ವೀರಾಪೂರ, ಕೆಲವು ದಿನಗಳಿಂದ ಯಾರಿಗೋ ಏನೋ ಮಾಡುವ ಉದ್ದೇಶವನ್ನ ಹೊಂದಿದ್ದ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಮನೆಯತ್ತ ಪೊಲೀಸರು ಹೊರಟಾಗ, ಮಾರಕ ಆಯುಧಗಳನ್ನ ಬಿಟ್ಟು ಪರಾರಿಯಾಗಿದ್ದಾನೆ.
ಬೆಂಡಿಗೇರಿ ಠಾಣೆ ಇನ್ಸಪೆಕ್ಟರ್ ಅರುಣಕುಮಾರ ಸಾಳುಂಕೆ ನೇತೃತ್ವದಲ್ಲಿ ಪ್ರಕರಣದಲ್ಲಿ ದಾಖಲಾಗಿದ್ದು, ಎಎಸ್ಐ ಎಸ್.ಎಸ್.ರಾಯಜಿ ತನಿಖಾಧಿಕಾರಿಯಾಗಿದ್ದಾರೆ. ರೌಡಿ ಷೀಟರ್ ಶ್ರೀನಿವಾಸ್ ವೀರಾಪುರ ಮೇಲೆ 1959 ಆರ್ಮ್ಸ ACT ಪ್ರಕಾರ ಪ್ರಕರಣ ದಾಖಲಾಗಿದೆ.