ಚೀನಾ ದಾಳಿಯ ಬಗ್ಗೆ ಕೇಂದ್ರ ಅಧಿಕೃತವಾಗಿ ಯಾಕೆ ಹೇಳುತ್ತಿಲ್ಲ: ಕೃಷ್ಣ ಬೈರೇಗೌಡ
ಬೆಂಗಳೂರು: ಈಗಾಗಲೇ ತಿಂಗಳಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಮಾಧ್ಯಮಗಳು ಕ್ಷಣದಿಂದ ಕ್ಷಣಕ್ಕೆ ಬೇರೆ ರೀತಿ ವರದಿ ಮಾಡ್ತಿವೆ. ಉದ್ವಿಘ್ನ ಪರಿಸ್ಥಿತಿ ಹಿಂಸಾಚಾರಕ್ಕೆ ತಿರುಗಿದೆ. ಆದರೆ, ಅಧಿಕೃತವಾಗಿ ಏನು ನಡೆದಿದೆ ಎಂಬುದು ತಿಳಿಸ್ತಿಲ್ಲ. ರಕ್ಷಣಾ ಇಲಾಖೆ, ಕೇಂದ್ರ ಸರ್ಕಾರ ಮಾಹಿತಿ ನೀಡಿಲ್ಲ ಎಂದು ಮಾಜಿ ಸಚಿವ ಕೃಷ್ಣ ಬೈರೇಗೌಡ ಪ್ರಶ್ನಿಸಿದ್ದಾರೆ.
ಚೀನಾ ದಾಳಿಯ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿದ ಕೃಷ್ಣ ಬೈರೇಗೌಡ, ನಮ್ಮಯೋಧರ ಪರಿಸ್ಥಿತಿಯ ಬಗ್ಗೆಯೂ ಗೊತ್ತಾಗ್ತಿಲ್ಲ. ನಮ್ಮಯೋಧರು ಏನಾಗಿದ್ದಾರೆ. ಎಷ್ಟು ಯೋಧರು ಗಾಯಗೊಂಡಿದ್ದಾರೆ, ಹುತಾತ್ಮರಾಗಿದ್ದಾರೆ. ಇದರ ಬಗ್ಗೆ ಕೇಂದ್ರ ಮಾಹಿತಿ ನೀಡಬೇಕು. ಪ್ರತಿಪಕ್ಷಗಳನ್ನ ಸಭೆ ಕರೆದು ಮಾಹಿತಿ ನೀಡಬೇಕು. ಕೇಂದ್ರ ಸರ್ಕಾರ ಜನರನ್ನ ಕತ್ತಲಲ್ಲಿಡುವುದು ಬೇಡ. ಊಹಾಪೋಹಗಳ ಆಧಾರದ ಮೇಲೆ ಇರುವುದು ಬೇಡ. ಒಟ್ಟಾರೆಯಾಗಿ ಎಲ್ಲರೂ ಹೋರಾಡಬೇಕಿದೆ. ಇದರ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ಒದಗಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.