ಆ ಕಾಂಗ್ರೆಸ್ ಮುಖಂಡನ ಮಗಳು- ರಾಜ್ಯವೇ ಮೆಚ್ಚುವಂತ ಕೆಲಸ ಮಾಡಿದ್ದಾಳೆ.. ನಿಮಗೆ ಗೊತ್ತಾ..!
ಹುಬ್ಬಳ್ಳಿ: ಕೊರೋನಾ ಮಹಾಮಾರಿ ಇಡೀ ಪ್ರಪಂಚವನ್ನ ಗಾಬರಿ ಮಾಡಿರುವ ಬೆನ್ನಲ್ಲೇ ಕೊರೋನಾದಿಂದ ಗುಣಮುಖರಾದವರು, ತಮ್ಮ ಪ್ಲಾಸ್ಮಾವನ್ನ ದಾನ ಮಾಡಿ, ಹಲವರ ಪ್ರಾಣವನ್ನ ಉಳಿಸುತ್ತಿದ್ದಾರೆ. ಆದರೆ, ಹುಬ್ಬಳ್ಳಿಯ ಯುವತಿಯೋರ್ವಳು ಪ್ಲಾಸ್ಮಾ ದಾನ ಮಾಡುವ ಮೂಲಕ ರಾಜ್ಯದ ಮೊದಲ ಮಹಿಳೆ ಎಂಬ ಕೀರ್ತಿಗೆ ಪಾತ್ರವಾಗಿದ್ದಾಳೆ.
ಕೊರೋನಾ ಪಾಸಿಟಿವ್ ದೃಢಪಟ್ಟು ಚಿಕಿತ್ಸೆ ಪಡೆದವರು ಮರಳಿ ಪ್ಲಾಸ್ಮಾವನ್ನ ದಾನ ಮಾಡಿದರೇ, ಕೊರೋನಾ ರೋಗಿ ಗುಣಮುಖರಾಗುತ್ತಾರೆ. ಅದೇ ಕಾರಣಕ್ಕೆ ಕಾಂಗ್ರೆಸ್ ಮುಖಂಡ ಕಿರಣ ಪಾಟೀಲಕುಲಕರ್ಣಿಯವರ ಮಗಳು, ಕಾವ್ಯಾ ತನ್ನ A+ve ಪ್ಲಾಸ್ಮಾವನ್ನ ದಾನ ಮಾಡಿ ಮತ್ತೋಬ್ಬರ ಜೀವ ಉಳಿಸಿದ್ದಾರೆ.
ಹುಬ್ಬಳ್ಳಿ ನಗರದ ಕಾವ್ಯಾ ಪಾಟೀಲಕುಲಕರ್ಣಿ, ಪ್ಲಾಸ್ಮಾ ದಾನ ಮಾಡಿದ ನಂತರ, ಇದೊಂದು ಹೊಸ ರೀತಿಯ ಅನುಭವ. ಆದರೆ, ಇಂತಹ ಅವಕಾಶ ದೊರೆತಿರುವುದು ನನಗೆ ಖುಷಿ ನೀಡಿದೆ. ಮತ್ತೋಬ್ಬರಿಗೆ ಸಹಾಯ ಮಾಡಬೇಕೆಂದು ನಾನು ನನ್ನ ತಂದೆಯಿಂದ ಕಲಿತಿದ್ದೇನೆ ಎಂದರು.
ಕಿರಣ ಪಾಟೀಲಕುಲಕರ್ಣಿ ಕಾಂಗ್ರೆಸ್ ಮುಖಂಡರಾಗಿದ್ದು, ಬಡವರ ಪರವಾಗಿ ಸದಾಕಾಲ ಕಾರ್ಯನಿರ್ವಹಿಸುತ್ತಲೇ ಬಂದಿದ್ದಾರೆ. ಅದೇ ಗುಣ ಮಗಳು ಕಾವ್ಯಾರಲ್ಲಿ ಮುಂದುವರೆದಿರುವುದು ತಂದೆಗೂ ಸಂತಸ ಮೂಡಿಸಿದೆ.