ಕಾಂಗ್ರೆಸ್ ಕೊರೋನಾ ನಿಧಿಗೆ 50 ಸಾವಿರ ಕೊಟ್ಟ ಮಹಿಳೆ

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕವಿತಾ ಶ್ರೀನಾಥ ಕಾಂಗ್ರೆಸ್ ಕೊರೋನಾ ನಿಧಿಗೆ 50 ಸಾವಿರ ರೂಪಾಯಿಯ ಚೆಕ್ ನೀಡಿದ್ದಾರೆ.
ಮಹಾಮಾರಿ ಕೊರೋನಾ ವೈರಸ್ ನಿಂದ ಬಡವರ ಬದುಕು ಹಾಳಾಗುತ್ತಿದೆ. ಅನೇಕರು ಜೀವನ ನಡೆಸುವುದು ಕಷ್ಟಕರವಾಗಿದ್ದು ಅದಕ್ಕಾಗಿ ಕಾಂಗ್ರೆಸ್ ನಿಧಿಯನ್ನ ಸಂಗ್ರಹಣೆ ಮಾಡುತ್ತಿದೆ. ಇದೇ ಕಾರಣಕ್ಕೆ ಇಂದು ಬೆಳಿಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ನಿವಾಸಕ್ಕೆ ತೆರಳಿದ ಕವಿತಾ ಶ್ರೀನಾಥ, 50ಸಾವಿರದ ಚೆಕ್ ನೀಡಿದರು.