Posts Slider

Karnataka Voice

Latest Kannada News

ಕತಾರ್‌ನಲ್ಲಿ ಮನಸೆಳೆದ ಡಾ.ಸಹನಾ ಭಟ್ ಭರತನಾಟ್ಯ…

Spread the love

ಕತಾರ್: ಭಾರತೀಯ ಸಾಂಸ್ಕೃತಿಕ ಕೇಂದ್ರ ಕತಾರ್ ಆಶ್ರಯದಲ್ಲಿ ದೋಹಾ ನಗರದ ಭಾರತೀಯ ಸಾಂಸ್ಕೃತಿಕ ಕೇಂದ್ರದ “ಅಶೋಕ ಸಭಾಂಗಣದಲ್ಲಿ” ತಾಯ್ನಾಡಿನಿಂದ ಆಗಮಿಸಿದ ಕರ್ನಾಟಕದ ಖ್ಯಾತ ಭರತನಾಟ್ಯ ಕಲಾವಿದೆ ವಿದೂಷಿ ಡಾ. ಸಹನಾ ಭಟ್ ಅವರು ನೆರೆದ ಪ್ರೇಕ್ಷಕರನ್ನು ತಮ್ಮ ಅದ್ಭುತ ನೃತ್ಯಗಳ ಮೂಲಕ ಮನಸೊರೆಗೊಂಡರು.

ಕಾರ್ಯಕ್ರಮದಲ್ಲಿ ಭಾರತೀಯ ರಾಯಭಾರಿ ಕಚೇರಿಯ ಡೆಪ್ಯೂಟಿ ಚೀಫ್ ಮಿಷನ್ (DCM) ಸಂದೀಪ್ ಕುಮಾರ ಅವರು ಮುಖ್ಯ ಅಥಿತಿ ಗಳಾಗಿ ಬಾಗವಸಿದ್ದರು ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಮಣಿಕಂಠ ಅವರು ಮತ್ತು ಉಪಾಧ್ಯಕ್ಷ  ಕನ್ನಡಿಗ ಸುಬ್ರಮಣ್ಯ ಹೆಬ್ಬಾಗಿಲು ಹಾಗೂ ಸಮಿತಿಯ ಸರ್ವಸದಸ್ಯರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಈ ಸುಂದರ ಕಾರ್ಯಕ್ರಮವನ್ನು ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಸುಮಾ ಮಹೇಶ್ ಗೌಡ ಅವರು ನಿರೂಪಿಸಿದರು. ಈ ಕಾರ್ಯಕ್ರಮ ಪ್ರತಿವಾರವೂ ಪ್ರಸಿದ್ದ ಕಲಾವಿದರ ಕಲೆಯನ್ನು ಕತಾರ್ ನಲ್ಲಿ ನೆಲೆಸಿರುವ ಭಾರತೀಯ ಕಾಲಭಿಮಾನಿಗಳಿಗೆ ಉಣಬಡಿಸುವ ಈ ಕಾರ್ಯ ಶ್ಲಾಘನೀಯ.
ಕಾರ್ಯಕ್ರಮದಲ್ಲಿ ವಿದುಷಿ ಡಾ. ಸಹನಾ ಭಟ್ ಅವರನ್ನು ಸಮಸ್ತ ಅನಿವಾಸಿ ಭಾರತೀಯರ ಪರವಾಗಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಡಾ. ಸಹನಾ ಭಟ್ ಅವರು ನೆರಿದಿದ್ದ ಎಲ್ಲ ರಾಜ್ಯಗಳಲ್ಲಿ ಕಲಾಭಿಮಾನಿಗಳ ಸಮ್ಮುಖದಲ್ಲಿ ತಾವು ಪ್ರದರ್ಶನ ನೀಡಿದ್ದು ತಮ್ಮ ಕಲಾಜೀವನದ ಅತ್ಯುತ್ತಮ ಕ್ಷಣವಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದರು ಮತ್ತು ಇದಕ್ಕೆ ಕಾರಣೀಭೂತರಾದ  ಸುಬ್ರಮಣ್ಯ ಹೆಬ್ಬಾಗಿಲು ಅವರಿಗೆ ಧನ್ಯವಾದ ಸಮರ್ಪಿಸಿದರು.


Spread the love

Leave a Reply

Your email address will not be published. Required fields are marked *