‘ದಿ ಕಾಶ್ಮೀರಿ ಪೈಲ್’ ಸಿನೇಮಾ ಮಾಡಿದವರೇ ಭಯೋತ್ಪಾದಕರು: ಹಿಂದೂ-ಮುಸ್ಲಿಂ-ಕ್ರಿಸ್ಚಿಯನ್ ಬಳಗ…

ಹುಬ್ಬಳ್ಳಿ: ಹಿಂದೂಗಳನ್ನ ನೋಡಿದರೇ ಮುಸ್ಲಿಂರು, ಮುಸ್ಲಿಂರನ್ನ ನೋಡಿದರೇ ಹಿಂದೂಗಳು ಬೈಯುವಂತೆ ಮಾಡಿದ ದಿ ಕಾಶ್ಮೀರಿ ಪೈಲ್ ಸಿನೇಮಾ ಮಾಡಿದವರೇ ಭಯೋತ್ಪಾದಕರೆಂದು ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ ಯುವಕರ ಬಳಗ ಆರೋಪ ಮಾಡಿದೆ.
ಈ ಬಗ್ಗೆ ನಗರದಲ್ಲಿಂದು ಮಾತನಾಡಿದ ಬಳಗದ ಅಸ್ಪಕ ಕುಮಾಟಕರ, ಬಿಜೆಪಿ ಚುನಾವಣೆಗೆ ಪೂರಕವಾಗಿ ಈ ಸಿನೇಮಾವನ್ನ ಮಾಡಿಸಿದೆ. ಸಿನೇಮಾದ ನಿರ್ಮಾಪಕ, ನಟರು ಭಯೋತ್ಪಾದಕರು ಎಂದು ದೂರಿದರು.
ಈ ಸಿನೇಮಾವನ್ನ ಬ್ಯಾನ್ ಮಾಡಬೇಕೆಂದು ರಾಷ್ಟ್ರಪತಿಗಳಿಗೆ ಮನವಿ ಮಾಡಿಕೊಳ್ಳುವುದಾಗಿ ಬಳಗವೂ ಹೇಳಿಕೊಂಡಿತು.