ಕಸಬಾಪೇಟೆ ಪೊಲೀಸ್ ಠಾಣೆಯ ಮುಂದೆ ನೂರಾರು ಜನ ಜಮಾವಣೆ: ನಡೆದದ್ದೇನು ಗೊತ್ತಾ..
1 min readಹುಬ್ಬಳ್ಳಿ: ಕಳೆದ ಎರಡು ದಿನಗಳ ಹಿಂದೆ ಪ್ರಾನ್ಸ್ ದೇಶದ ಪ್ರಧಾನಿಯ ಭಾವಚಿತ್ರವನ್ನ ತುಳಿದಿದ್ದಾರೆಂದು ದೂರು ಇಲ್ಲದೇ ಕೆಲವು ಬಾಲಕರನ್ನ ಪೊಲೀಸರು ಬಂಧಿಸಿಟ್ಟಿದ್ದಾರೆಂದು ಆಕ್ರೋಶಗೊಂಡ ನೂರಾರೂ ಜನರು ಕಸಬಾಪೇಟೆ ಪೊಲೀಸ್ ಠಾಣೆಯ ಮುಂದೆ ಜಮಾವಣೆಗೊಂಡ ಘಟನೆ ನಡೆಯಿತು.
ಪ್ರಾನ್ಸ್ ಪ್ರಧಾನಿ ಒಂದು ಕೋಮಿನ ವಿರುದ್ಧವಾಗಿಯೂ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಕೆಲವರು ಅವರ ಭಾವಚಿತ್ರವನ್ನ ತುಳಿದಿದ್ದರಂತೆ. ಈ ಬಗ್ಗೆ ಯಾರೂ ದೂರು ನೀಡದೇ ಇದ್ದರೂ ಕಸಬಾಪೇಟೆ ಠಾಣೆ ಪೊಲೀಸರು ಬಾಲಕರನ್ನ ಬೆಳಿಗ್ಗೆಯಿಂದ ಠಾಣೆಯಲ್ಲೇ ಕೂಡಿಸಿಕೊಂಡಿದ್ದಾರೆಂದು ದೂರಿದ ಪ್ರಮುಖರು, ಪೊಲೀಸರು ಕ್ರಮವನ್ನ ಖಂಡಿಸಿದರು.
ಒಂದೇ ಸಮಯದಲ್ಲಿ ನೂರಾರೂ ಜನರು ಜಮಾವಣೆಗೊಂಡಿದ್ದರಿಂದ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಪೊಲೀಸ್ ಇನ್ಸಪೆಕ್ಟರ್ ಜೊತೆ ಕೆಲವು ಪ್ರಮುಖರು ಮಾತನಾಡಿದ ನಂತರ ಬಾಲಕರನ್ನ ಬಿಟ್ಟು ಕಳಿಸಿದ್ದು, ಪ್ರಜಾಪ್ರಭುತ್ವದಲ್ಲಿ ಇದೇಲ್ಲ ನಡೆಯುವುದು ಸರಿಯಲ್ಲ ಎಂದು ಪ್ರಮುಖರು ದೂರಿದರು.
ಕಸಬಾಪೇಟೆ ಪೊಲೀಸ್ ಠಾಣೆಯ ಮುಂದೆ ಇದೀಗ ಹೆಚ್ಚುವರಿ ಪೊಲೀಸರನ್ನ ನಿಯೋಜನೆ ಮಾಡಲಾಗಿದ್ದು, ಅಲ್ಲಿದ್ದ ಎಲ್ಲರನ್ನೂ ಚದುರಿಸಲಾಗಿದೆ.