ನಾವೂ ನಿಮ್ಮ ಧ್ವನಿಯಷ್ಟೇ.. ಅಶೋಕ ಸಜ್ಜನರಿಗೆ ಥ್ಯಾಂಕ್ಸ್ ಹೇಳಿ: ಮಾಳಗಿಯವರ ಕುಟುಂಬಕ್ಕೆ ಸುರೇಶಕುಮಾರ ಅಭಯ
ನಿಮಗೆ ‘ಕರ್ನಾಟಕ ವಾಯ್ಸ್ ಯೂಟ್ಯೂಬ್’ ನಿಮ್ಮದು ಅನಿಸಿದರೇ ಸಬ್ ಸ್ಕ್ರೈಬ್ ಬಟನ್ ಮತ್ತು ಪಕ್ಕದಲ್ಲಿ ಕಾಣುವ ಬೆಲ್ ಬಟನ್ ಒತ್ತಿ
ಧಾರವಾಡ: ಶಿಕ್ಷಣ ಇಲಾಖೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿಯೂ ಕಾರ್ಯನಿರ್ವಹಣೆ ಮಾಡಿದ್ದ ಮಹದೇವ ಮಾಳಗಿಯವರ ಬಗ್ಗೆ ನಿಮ್ಮ ಕರ್ನಾಟಕ ವಾಯ್ಸ್ ಯೂಟ್ಯೂಬ್ ಮತ್ತು ಕರ್ನಾಟಕವಾಯ್ಸ್.ಕಾಂ ಮಾಹಿತಿ ನೀಡಿದ್ದು ನಿಮ್ಮ ಧ್ವನಿಯಾಗಿ ಮಾತ್ರ.
ಇದನ್ನ ನಾವೂ ಫಲಶೃತಿ ಎಂದು ಹೇಳಿಕೊಳ್ಳುವುದು ತಪ್ಪಾಗುತ್ತದೆ. ಇಂತಹ ಕೆಲಸಕ್ಕೆ ನಮ್ಮನ್ನ ಪ್ರೇರೆಪಿಸಿದ್ದು ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾದ್ಯಕ್ಷ ಅಶೋಕ ಸಜ್ಜನ. ಅವರ ಕಾಳಜಿಯಿಂದಲೇ ಮಹದೇವ ಮಾಳಗಿಯವರಿಗೆ ನ್ಯಾಯ ಸಿಗಲಿದೆ.
ನಿನ್ನೆ ಮಹದೇವ ಮಾಳಗಿಯವರ ಕುರಿತು ಕರ್ನಾಟಕ ವಾಯ್ಸ್ ಯೂಟ್ಯೂಬ್ ಚಾನಲ್ ನಲ್ಲಿ ಮಾಹಿತಿಯನ್ನ ಬಿಸ್ತರಿಸಲಾಗಿತ್ತು. ಅದನ್ನ ಸಚಿವರಿಗೆ ಗ್ರೇಡ್-2 ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷೆ ಆಶಾ ಮುನವಳ್ಳಿ ಸಚಿವರಿಗೆ ಕಳಿಸಿ ಮಾಹಿತಿ ಹಂಚಿದ್ದರು. ಇದನ್ನ ಗಮನಿಸಿದ ಸಚಿವರು ಬೆಳಿಗ್ಗೆ 7ಕ್ಕೆ ಆಶಾ ಮುನವಳ್ಳಿಯವರಿಗೆ ಕಾಲ್ ಮಾಡಿ ಮಾಹಿತಿಯನ್ನ ಪಡೆದಿದ್ದಾರೆ. ಅಷ್ಟೇ ಅಲ್ಲ, ಮುನವಳ್ಳಿಯವರಿಂದ ಮಹದೇವ ಮಾಳಗಿಯವರ ಕುಟುಂಬದ ಮೊಬೈಲ್ ಸಂಖ್ಯೆ ಪಡೆದು, ಎಲ್ಲ ವಿಷಯವನ್ನ ಕೇಳಿ, ಮಹದೇವ ಮಾಳಗಿಯವರ ಪತ್ನಿಗೆ ನೌಕರಿ ನೀಡುವ ಭರವಸೆ ನೀಡಿದ್ದಾರೆ.
ಇದೇಲ್ಲವೂ ನಡೆದದ್ದು ಒಬ್ಬ ಅಶೋಕ ಸಜ್ಜನ ಎಂಬ ಮಾನವೀಯತೆಯ ವ್ಯಕ್ತಿಯಿಂದಷ್ಟೇ.. ಹೇಳಬಹುದು. ಕರ್ನಾಟಕವಾಯ್ಸ್.ಕಾಂ ನಿಮ್ಮ ಧ್ವನಿಯಾಗಿ ನಿರಂತರವಾಗಿ ಜೊತೆಗಿರಲಿದೆ.