ಕರ್ನಾಟಕವಾಯ್ಸ್.ಕಾಂನಲ್ಲಿ ಕೆಲಸ ಮಾಡುವವರು ಯಾರೂ ಗೊತ್ತಾ….!?

ಹುಬ್ಬಳ್ಳಿ: ಸಾಮಾಜಿಕ ಕಾಳಜಿಯನ್ನ ಹೊಂದಿದ್ದ ಕೆಲವರು ಯುವಕರು ಕೂಡಿಕೊಂಡು ಕರ್ನಾಟಕವಾಯ್ಸ್.ಕಾಂ ಆರಂಭಿಸಿದ್ದು, ಓದುಗರಿಂದ ಸಾಕಷ್ಟು ಮೆಚ್ಚುಗೆಗಳ ಮಾತುಗಳು ಕೇಳಿ ಬರುತ್ತಿವೆ.
ಹಲವರು ಹಲವು ರೀತಿಯಲ್ಲಿ ತನಿಖೆ ಮಾಡುವ ರೀತಿಯಲ್ಲೂ ಇದರಲ್ಲಿ ಯಾರು ಯಾರೂ ಕೆಲಸ ಮಾಡುತ್ತಾರೆಂದು ಹುಡುಕುವ ಪ್ರಯತ್ನವನ್ನ ಮಾಡುತ್ತಿದ್ದಾರೆ. ಅದೇ ಕಾರಣಕ್ಕೆ ಈ ವೆಬ್ ಸೈಟಿನಲ್ಲಿ ಇರುವುದು ಬೆರಳೆಣಿಕೆ ಮಾತ್ರ.

ಪ್ರಮುಖವಾಗಿ ವಿನಯ ರೆಡ್ಡಿ ಹಾಗೂ ಈಶ್ವರ ಮನಗುಂಡಿ ಇಲ್ಲಿ ಕಾರ್ಯನಿರ್ವಹಿಸುತ್ತಾರೆ. ಹಲವರು ಮಾಹಿತಿದಾರರಾಗಿದ್ದಾರೆ. ಈ ವೆಬ್ ಸೈಟ್ ನಲ್ಲಿ ನೂರಕ್ಕೆ ನೂರು ಸತ್ಯದ ವರದಿಗಳನ್ನ ಮಾತ್ರ ಹಾಕುತ್ತ ಬರಲಾಗಿದೆ. ಈಗಾಗಲೇ ಕರ್ನಾಟಕವಾಯ್ಸ್.ಕಾಂ ಮಾಡಿದ ಎರಡು ಪ್ರಮುಖ ತನಿಖಾ ವರದಿಗಳಲ್ಲಿ ಪೊಲೀಸ್ ಅಧಿಕಾರಿಗಳ ಸಮೇತ 11 ಪೊಲೀಸರು ಅಮಾನತ್ತಾಗಿದ್ದಾರೆ.
ಕರ್ನಾಟಕವಾಯ್ಸ್.ಕಾಂ ಗೆ ಯಾವುದೇ ಪಕ್ಷ, ಧರ್ಮಕ್ಕಿಂತ ಸಾಮಾಜಿಕ ಕಾಳಜಿ ಮುಖ್ಯವಾಗಿದೆ. ಇದನ್ನ ಬಯಸುವ ಯಾರೇ ಇದ್ದರೂ ಕರ್ನಾಟಕವಾಯ್ಸ್.ಕಾಂ ವೇದಿಕೆ ನೀಡಲಿದೆ.
ಇನ್ನುಳಿದಂತೆ ನಿಮ್ಮ ಸಾಥ್ ಬೇಕು.. ಧನ್ಯವಾದ