Posts Slider

Karnataka Voice

Latest Kannada News

“ಕರ್ನಾಟಕ ಪೊಲೀಸ್” ಹೆಮ್ಮೆ ಹೆಚ್ಚಿಸಿದ ಇನ್ಸಪೆಕ್ಟರ್ ಮುರುಗೇಶ ಚೆನ್ನಣ್ಣನವರ..!

1 min read
Spread the love

ದೇಶದ ಮೂಲೆ ಮೂಲೆಯಿಂದ ಬಂದಿದ್ದ ಪ್ರೋಪೆಷನಲ್  ಕ್ರೀಡಾಪಟುಗಳ ನಡುವೆಯೂ ಪೊಲೀಸ್ ಇನ್ಸಪೆಕ್ಟರ್ ಮುರುಗೇಶ ಚೆನ್ನಣ್ಣನವರ ಮಾಡಿರೋ ಸಾಧನೆ ದೊಡ್ಡದು..!

ಇನ್ಸಪೆಕ್ಟರ್ ಮುರುಗೇಶ ಚೆನ್ನಣ್ಣನವರ ಹೇಳಿಕೆ..

I don’t have words to express as I stood Overall 2nd n 1st in my Age category…
Tough competition as all athletes are professional n famous athletes in India….
Many ironmans n famous cyclists from Mumbai,Hyd,Pune,Satara,Kolhapur (sports hub),Ahmedanagar,etc etc

ಅಹಮದನಗರ: ಕರ್ನಾಟಕ ಪೊಲೀಸ್ ಇತಿಹಾಸದಲ್ಲೇ ಹೊಸದೊಂದು ಮೈಲಿಗಲ್ಲು ಮೂಡಿಸುವಲ್ಲಿ ಹುಬ್ಬಳ್ಳಿ ಹೆಸ್ಕಾಂ ಜಾಗೃತದಳದ ಇನ್ಸಪೆಕ್ಟರ್ ಮುರುಗೇಶ ಚೆನ್ನಣ್ಣನವರ ಯಶಸ್ವಿಯಾಗಿದ್ದು, ಬೇರೆ ರಾಜ್ಯದಲ್ಲಿ ರಾಜ್ಯದ ಕೀರ್ತಿ ಪತಾಕೆಯನ್ನ ಹಾರಿಸಿದ್ದಾರೆ.

ವೀಡಿಯೋ ಝಲಕ..

ಮಹಾರಾಷ್ಟ್ರದ ಅಹಮದನಗರದಲ್ಲಿ ನಡೆದಿದ್ದ DUATHLON ದಲ್ಲಿ 23.1 ಕಿಲೋಮೀಟರ್ ರನ್ನಿಂಗ್, 90 ಕಿಲೋಮೀಟರ್ ಸೈಕಲಿಂಗ್ ನ ಕೇವಲ 5 ಗಂಟೆ 7 ನಿಮಿಷದಲ್ಲಿ ಪೂರೈಸಿ, ತಮ್ಮ ‘ಏಜ್’ ಕೆಟಗೇರಿಯಲ್ಲಿ ಮೊದಲ ಸ್ಥಾನವನ್ನೂ, ಓವರಾಲ್ ಸ್ಪರ್ಧೆಯಲ್ಲಿ ಎರಡನೇಯ ಸ್ಥಾನವನ್ನು ಗಳಿಸಿದ್ದು, ರಾಜ್ಯದ ಪೊಲೀಸ್ ಇತಿಹಾಸದಲ್ಲಿ ಇದು ಮೊದಲ ಬಾರಿಯಾಗಿದೆ.

ಹೆಸ್ಕಾಂ ಜಾಗೃದಳದಲ್ಲಿರುವ ಇನ್ಸಪೆಕ್ಟರ್ ಮುರುಗೇಶ ಚೆನ್ನಣ್ಣನವರ ಅವರ ಈ ಸಾಧನೆ ರಾಜ್ಯದ ಪೊಲೀಸ್ ಇಲಾಖೆಗೆ ಕೊಡುಗೆಯಾಗಿದೆ. ಇಂತಹದೊಂದು ಸಾಧನೆ ಮಾಡುವಲ್ಲಿ ಮುರುಗೇಶ ಚೆನ್ನಣ್ಣನವರ ಪರಿಶ್ರಮ ನಿರಂತರವಾಗಿತ್ತು. ಇದೀಗ ಮತ್ತೊಂದು ಸಾಧನೆಯನ್ನ  ಈ ಮೂಲಕ ಮಾಡಿದ್ದಾರೆ.

ದೇಶದ ಬಹುತೇಕ ರಾಜ್ಯಳಿಂದ ಆಗಮಿಸಿದ್ದ ನೂರಾರೂ ಸ್ಪರ್ಧಾಳುಗಳ ನಡುವೆಯೂ ಚೆನ್ನಣ್ಣನವರ ಅವರು ಮಾಡಿರುವ ಸಾಧನೆ ಕಡಿಮೆಯದ್ದಲ್ಲ. ಪೊಲೀಸ್ ಇಲಾಖೆಯಲ್ಲಿದ್ದುಕೊಂಡೇ, ಇಂತಹ ಕ್ರೀಡೆಗಳಲ್ಲಿ ಸಾಧನೆ ಮಾಡಿರುವುದು ಅಮೋಘವಾಗಿದೆ.

ಪೊಲೀಸ್ ಇನ್ಸಪೆಕ್ಟರ್ ಮುರುಗೇಶ ಚೆನ್ನಣ್ಣನವರ ಅವರು ರಾಜ್ಯದ ಪೊಲೀಸ್ ಇಲಾಖೆಯ ಗೌರವವನ್ನ ಮತ್ತಷ್ಟು ಹೆಚ್ಚಿಸಿದ್ದು, ಅವರಿಗೆ ಮತ್ತಷ್ಟು ಒಳ್ಳೆಯದಾಗಲಿ ಎಂದು ಬಯಸುತ್ತ.. ಒಂದ್ಸಲ ಕಂಗ್ರಾಟ್ಸ್ ತಿಳಿಸೋಣಲ್ಲವೇ..!


Spread the love

Leave a Reply

Your email address will not be published. Required fields are marked *