ಅಧಿವೇಶನ ಆರಂಭವಾಗುತ್ತಿದ್ದರೂ “ವಿರೋಧ ಪಕ್ಷದ ನಾಯಕ”ನ ಆಯ್ಕೆ ಮಾಡಲಾಗದ ಬಿಜೆಪಿ….
1 min readಭಾರತೀಯ ಜನತಾ ಪಕ್ಷ ಇಂತಹ ಸ್ಥಿತಿಗೆ ತಲುಪಲು ಕಾರಣವೇನು..
ಇದರಲ್ಲೂ ಇತಿಹಾಸ ನಿರ್ಮಾಣ ಮಾಡಲು ಹೊರಟಿತಾ ಬಿಜೆಪಿ…
ಬೆಂಗಳೂರು: ರಾಜ್ಯದಲ್ಲಿನ ವಿಧಾನಸಭೆಯಲ್ಲಿ ಇಂದಿನಿಂದ ಜುಲೈ 14ರ ವರೆಗೆ ಅಧಿವೇಶನ ಆರಂಭವಾಗುತ್ತಿದ್ದು, ಭಾರತೀಯ ಜನತಾ ಪಕ್ಷ ಇಲ್ಲಿಯವರೆಗೂ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಲಾಗದೇ ಪರದಾಡುತ್ತಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಹುಮತ ಪಡೆದು ಐದು ದಿನಗಳು ಕಳೆದಿರಲಿಲ್ಲ. ಆಗಲೇ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ‘ಬೇಗ ಮುಖ್ಯಮಂತ್ರಿ ಆಯ್ಕೆ ಮಾಡಲು ಕಾಂಗ್ರೆಸ್’ಗೆ ಆಗುತ್ತಿಲ್ಲ’ ಎಂದು ಟೀಕಿಸಿದ್ದರು.
ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆಯೂ ಟೀಕೆಗಳು ನಿರಂತರವಾಗಿ ನಡೆಸುತ್ತಿರುವ ಬಿಜೆಪಿ ತನ್ನದೇ ಪಕ್ಷದಲ್ಲಿ ನಾಯಕನ ಮಾಡುವಲ್ಲಿ ವಿಳಂಬ ಮಾಡುತ್ತಿರುವುದು ಸೋಜಿಗ ಮೂಡಿಸುತ್ತಿದೆ.
ಬಿಜೆಪಿಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಳ್ಲಕುತ್ತಿದ್ದ ಸಮಯದಲ್ಲಿ ಇಂತಹ ಸಂದರ್ಭಗಳು ಕಾಣುತ್ತಿರಲಿಲ್ಲ. ಆದರೆ, ಇಂದಿನ ಬೆಳವಣಿಗೆಗಳು ಬಿಜೆಪಿಯ ಸ್ಥಿತಿಯನ್ನ ಬಿಂಬಿಸುತ್ತಿದೆ.
ಜುಲೈ 14 ರೊಳಗೆ ಆದರೂ ಬಿಜೆಪಿ ತನ್ನ ನಾಯಕನ ಆಯ್ಕೆ ಮಾಡುತ್ತದೆಯೇ ಎಂಬುದನ್ನ ಕಾದು ನೋಡಬೇಕಿದೆ.