Posts Slider

Karnataka Voice

Latest Kannada News

ಕರ್ನಾಟಕದ “ಯಾವೊಬ್ಬ” ಸಂಸದರಿಗೂ ಟಿಕೆಟ್ ಇಲ್ಲದ “ಬಿಜೆಪಿ” ಮೊದಲ ಲಿಸ್ಟ್ ಬಿಡುಗಡೆ….

1 min read
Spread the love

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಗೆ ಭಾರೀ ತಯಾರಿ ನಡೆಸಿರುವ ಬಿಜೆಪಿ ಇಂದು, ಮಂಗಳವಾರ (ಮಾರ್ಚ್‌ 2) ಪಕ್ಷದ 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಚುನಾವಣಾ ಆಯೋಗವು ಲೋಕಸಭೆಗೆ ಚುನಾವಣಾ ಘೋಷಣೆ ದಿನಾಂಕ ಘೋಷಿಸುವ ಮೊದಲೇ ಬಿಜೆಪಿ ತನ್ನ ಮೊದಲ ಪಟ್ಟಿ ಬಿಡುಗಡೆ ಮಾಡಿದೆ.


ನವದೆಹಲಿಯ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಾಯಕರು ಲೋಕಸಭೆ ಚುನಾವಣೆಗೆ ಪಟ್ಟಿ ಬಿಡುಗಡೆ ಮಾಡಿದರು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ ತಾವ್ಡೆ ಈ ಮಾಹಿತಿ ನೀಡಿದರು.

195 ಅಭ್ಯರ್ಥಿಗಳಲ್ಲಿ ಇದರಲ್ಲಿ 28 ಮಹಿಳೆಯರಿಗೆ ಟಿಕೆಟ್ ನೀಡಲಾಗಿದೆ. 34 ಕೇಂದ್ರ ಸಚಿವರಿಗೆ ಟಿಕೆಟ್ ಲಭಿಸಿದೆ. 47 ಹೊಸ ಮುಖಗಳಿಗೆ ಟಿಕೆಟ್‌ ನೀಡಲಾಗಿದೆ. ಅಲ್ಲದೆ, ಇಬ್ಬರು ಮಾಜಿ ಮುಖ್ಯಮಂತ್ರಿಗಳಿಗೆ ಲೋಕಸಭೆಗೆ ಸ್ಪರ್ಧಿಸಲು ಅವಕಾಶ ನೀಡಲಾಗಿದೆ.


ಪಟ್ಟಿಯ ಪ್ರಕಾರ ವಾರಾಣಸಿಯಿಂದ ಪ್ರಧಾನಿ ಮೋದಿ ಮತ್ತೊಮ್ಮೆ ಸ್ಪರ್ಧಿಸಲಿದ್ದಾರೆ. ಗುಜರಾತ್‌ ಗಾಂಧಿನಗರದಿಂದ ಗೃಹ ಸಚಿವ ಅಮಿತ್ ಶಾ ಹಾಗೂ ಲಕ್ನೊದಿಂದ ರಾಜನಾಥ ಸಿಂಗ್, ಅಮೆಥಿಯಿಂದ ಸ್ಮೃತಿ ಇರಾನಿ, ಕೋಟಾದಿಂದ ಓಂ ಬಿರ್ಲಾ ಅವರಿಗೆ ಟಿಕೆಟ್‌ ನೀಡಲಾಗಿದೆ. ಈ ಸಲ ಮಾಜಿ ಸಚಿವೆ ದಿವಂಗತ ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್ ಅವರಿಗೆ ದೆಹಲಿಯ ನವದೆಹಲಿ ಕ್ಷೇತ್ರದಲ್ಲಿ ಟಿಕೆಟ್‌ ನೀಡಲಾಗಿದೆ. ಅಲ್ಲಿ ದೆಹಲಿ ಕ್ಷೇತ್ರದಲ್ಲಿ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿಗೆ ಟಿಕೆಟ್ ನಿರಾಕರಿಸಲಾಗಿದೆ. ರಾಜ್ಯಸಭೆ ಸದಸ್ಯರಾಗಿದ್ದ ರಾಜೀವ್ ಚಂದ್ರಶೇಖರ್ ಅವರಿಗೆ ತಿರುವನಂತಪುರಂ ಲೋಕಸಭೆ ಟಿಕೆಟ್ ನೀಡಲಾಗಿದೆ.


ಘೋಷಣೆಯಾದ 195 ಕ್ಷೇತ್ರಗಳಲ್ಲಿ ಉತ್ತರ ಪ್ರದೇಶದ ರಾಜ್ಯದಲ್ಲೇ 51 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆಯಾಗಿದೆ. ಹಲವು ನಾಯಕರಿಗೆ ಮೊದಲ ಪಟ್ಟಿಯಲ್ಲಿ ಟಿಕೆಟ್ ಸಿಕ್ಕಿದೆ. ಕರ್ನಾಟಕದಿಂದ ಯಾವುದೇ ಕ್ಷೇತ್ರಕ್ಕೆ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿಲ್ಲ.

ರಾಜ್ಯವಾರು ಟಿಕೆಟ್‌ ಘೋಷಣೆ..

ಉತ್ತರ ಪ್ರದೇಶ -51
ಪಶ್ಚಿಮ ಬಂಗಾಳ -20
ಮಧ್ಯಪ್ರದೇಶ -24
ಗುಜರಾತ್ -15
ರಾಜಸ್ಥಾನ -15
ಕೇರಳ -12
ತೆಲಂಗಾಣ -9
ಅಸ್ಸಾಂ -11
ಜಾರ್ಖಂಡ್ -11
ಛತ್ತೀಸಗಢ -11
ದೆಹಲಿ -5
ಜಮ್ಮು ಮತ್ತು ಕಾಶ್ಮೀರ -2
ಉತ್ತರಾಖಂಡ -3
ಅಂಡಮಾನ್ ಮತ್ತು ನಿಕೋಬಾರ್-1
ದಮನ್ ಮತ್ತು ದಿಯೂ-1
ಅರುಣಾಚಲಪ್ರದೇಶ -2
ಗೋವಾ -1
ತ್ರಿಪುರಾ -1
ಒಟ್ಟು 195 ಅಭ್ಯರ್ಥಿಗಳಲ್ಲಿ ಹಿಂದುಳಿದ ವರ್ಗಕ್ಕೆ 57, ಪರಿಶಿಷ್ಟ ಜಾತಿಗೆ 27, ಪರಿಶಿಷ್ಟ ಪಂಗಡಕ್ಕೆ 18 ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಲಾಗಿದೆ.


Spread the love

Leave a Reply

Your email address will not be published. Required fields are marked *