ಹುಬ್ಬಳ್ಳಿಯ ಕರಡಿಕೊಪ್ಪದಲ್ಲಿ 23 ಕುರಿಗಳನ್ನ ಕದ್ದ ಚೋರರು…!
1 min readಹುಬ್ಬಳ್ಳಿ: ತಾಲೂಕಿನ ಕರಡಿಕೊಪ್ಪ ಗ್ರಾಮದ ಹೊರವಲಯದಲ್ಲಿದ್ದ ಕುರಿ ಸಾಕಾಣಿಕೆ ಕೇಂದ್ರದಲ್ಲಿ ಕುರಿಗಳನ್ನ ಕಳ್ಳತನ ಮಾಡಿಕೊಂಡು ಪರಾರಿಯಾದ ಘಟನೆ ನಡೆದಿದೆ.
ಚೆನ್ನಬಸಪ್ಪ ಬಸವಣ್ಣೆಪ್ಪ ಬೆನಕನ್ನವರ ಅವರಿಗೆ ಸೇರಿದ ಹೊಲದಲ್ಲಿ ಕುರಿ ಸಾಕಾಣಿಕೆ ಶೆಡ್ಡಿನ ತಂತಿ ಜಾಳಿಗೆಯನ್ನ ಕತ್ತರಿಸಿ, ಒಳಗೆ ನುಗ್ಗಿರುವ ಕಳ್ಳರು 23 ಕುರಿಗಳನ್ನ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ. ಪ್ರತಿವೊಂದು ಕುರಿಯ ಬೆಲೆ ಏಳು ಸಾವಿರ ರೂಪಾಯಿಗಳೆಂದು ಹೇಳಲಾಗಿದೆ.
ಕಳ್ಳತನವಾದ 23 ಕುರಿಗಳ ಮೌಲ್ಯ 161000 ಸಾವಿರ ರೂಪಾಯಿ ಎಂದು ಹೇಳಲಾಗಿದ್ದು, ಪ್ರಕರಣ ದಾಖಲು ಮಾಡಿಕೊಂಡಿರುವ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.
ಕುರಿಗಳನ್ನ ಕಳ್ಳತನ ಮಾಡಿಕೊಂಡು ಹೋಗಲು ವಾಹನವನ್ನ ತಂದಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಪೊಲೀಸರು ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ.