ಧಾರವಾಡದ “ಕನ್ನಡ ಹೋರಾಟಗಾರರೇ” ಎಲ್ಲಿದ್ದೀರಿ…!? ಇದು ನಿಮಗೆ ಕಂಡಿಲ್ವಾ…!?

1886 ರಲ್ಲಿ ಆರಂಭಗೊಂಡಿರುವ ಈ ಜಿಮಖಾನಾ ಕ್ಲಬ್ನ ಬಹುತೇಕ ಸದಸ್ಯರು ಕನ್ನಡ ಮೀಡಿಯಂದವರೇ…
ಧಾರವಾಡ: ಸರಕಾರದ ನಿಯಮಾವಳಿಗಳನ್ನ ಸರಕಾರಿ ಸ್ವಾಮ್ಯದ ಕ್ಲಬ್ವೊಂದು ಮೀರಿ ನಡೆದುಕೊಂಡರೂ, ಯಾರೂ ಕ್ಯಾರೇ ಅನ್ನದ ಹಾಗೇ ನಡೆದುಕೊಳ್ಳುತ್ತಿರುವುದು ಸೋಜಿಗದ ಸಂಗತಿಯಾಗಿದೆ.
ಧಾರವಾಡದ ಪ್ರಮುಖ ಸ್ಥಳದಲ್ಲಿರುವ ಜಿಮಖಾನಾ ಕ್ಲಬ್ ಸರಕಾರಿ ಸ್ವಾಮ್ಯದಲ್ಲಿದೆ. ಸರಕಾರದ ಪ್ರಮುಖರೇ ಇದರ ಸದಸ್ಯರಾಗಿದ್ದಾರೆ. ಪ್ರತಿಷ್ಠಿತರು ಕೂಡಾ ಇದರಲ್ಲಿ ಸದಸ್ಯತ್ವ ಹೊಂದಿದ್ದಾರೆ. ಆದರೇನುಪಯೋಗ.
ಇಲ್ಲಿ ಕನ್ನಡದ ಅಕ್ಷರಳೇ ಮಾಯವಾಗಿವೆ. ನವೆಂಬರ್ ಬಂತೇಂದರೇ ಕನ್ನಡದ ಬಗ್ಗೆ ಮಾತನಾಡುವ ಸಂಘಟನೆಗಳಿಗೆ ಕಂಡಿಲ್ಲವೋ… ಕಂಡರೂ ಜಾಣ ಕುರುಡೋ ಎನ್ನುತ್ತಿದ್ದಾರೆ ಹಲವರು.
ಈಗಲಾದರೂ, ಇದಕ್ಕೊಂದು ಕನ್ನಡದ ನಾಮಫಲಕದ ಅವಶ್ಯಕತೆಯನ್ನ ಅರಿಯುವ ಜರೂರತ್ತು ಇದೆ ಎಂಬುದು ಸಂಬಂಧಿಸಿದ ಅಧಿಕಾರಿಗಳಿಗೂ ಮತ್ತು ನವೆಂಬರ್ ಕನ್ನಡ ನಾಯಕರಿಗೂ ಇರಬೇಕಿದೆ, ಅಲ್ಲವೇ…!?