ಶಿಕ್ಷಕ ಮನಸ್ಸು ಮಾಡಿದ್ರೇ ಏನೇಲ್ಲಾ ಮಾಡಬಹುದು ಗೊತ್ತಾ..! ಲಾಕ್ ಡೌನ್ ಸಮಯದಲ್ಲಿ ಅದ್ಭುತ್ ಸೃಷ್ಠಿ
ಬಳ್ಳಾರಿ: ಇಲ್ಲಿ ಮಕ್ಕಳು ಓದಲು ಬರ್ತಿಲ್ಲ. ಅವರು ಬಂದ್ರೇ, ಈ ಲೋಕವನ್ನ ಬಿಟ್ಟು ಹೊರಗೆ ಹೋಗಬಾರದು ಅನಿಸಬೇಕು. ಹಾಗಾದ್ರೇ, ಏನು ಮಾಡಿದ್ರೇ ಚೆಂದಾ ಎಂದುಕೊಂಡಾಗಲೇ ಯೋಚಿಸಿದಾಗ ಸೃಷ್ಠಿಯಾಗಿದ್ದೇ ಈ ಅಪರೂಪದ ಕಲೆಯ ಚಿತ್ರಣ..
ಅಂದ ಹಾಗೇ ನಾವು ನಿಮಗೆ ತಿಳಿಸಲು ಹೊರಟಿರುವುದು ಯಾವುದೋ ಖಾಸಗಿ ಶಾಲೆಯ ಚಿತ್ರಣವಲ್ಲ. ಬದಲಿಗೆ ಸರಕಾರಿ ಶಾಲೆಯೊಂದರ ಮನಸ್ಸಿಗೆ ಮುದ ನೀಡುವ ಚಿತ್ರಣ.. ಎಸ್.. ಇದು ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಪ್ರಭು ಕ್ಯಾಂಪನ್ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ.
ಶಿಕ್ಷಕ ಹನಮಂತಪ್ಪ ಮೋರೆಯವರ ಆಸಕ್ತಿಗೆ ನೀರು ಹಾಕಿ ಪೂರೈಕೆ ಮಾಡಿದ್ದು ಶಾಲೆಯ ಮುಖ್ಯಾಧ್ಯಾಪಕ ಎಸ್.ಚಂದ್ರಪ್ಪ, ಎಸ್.ಡಿ.ಎಂ.ಸಿ ಅಧ್ಯಕ್ಷ ಜಿ.ಸುರೇಶ, ಪಿಡಿಓ ಬೀರಲಿಂಗಪ್ಪ, ಶಾಲೆಯಲ್ಲಿ ಕೆಲವೇ ದಿನಗಳವರೆಗೆ ಕಾರ್ಯನಿರ್ವಹಿಸಿದ ಅತಿಥಿ ಶಿಕ್ಷಕಿ ರೀನಾ ಧನಸಹಾಯ ಮಾಡಿದ್ರು. ಇವರೆಲ್ಲರ ಆಸಕ್ತಿಯಿಂದ ಶಾಲೆಯ ಪ್ರತಿ ಗೋಡೆಯಲ್ಲೂ ಶಿಕ್ಷಣವೇ ಶಿಕ್ಷಣ ಕಾಣುತ್ತಿದೆ.
ಹೊಸಪೇಟೆಯ ಶಕೀಲ ಮತ್ತು ಬೆಟ್ಟದರಾಜು ಕೈಚಳಕದಲ್ಲಿ ರಾಷ್ಟ್ರಧ್ವಜ, ಸಾಲುಮರದ ತಿಮ್ಮಕ್ಕ, ಆಲದಮರ, ಹುಲಿ, ನವಿಲು. ಜಲಚರ ಪ್ರಾಣಿಗಳು, ಚೋಟಾ ಭೀಮ, ಸಾರಿಗೆಗಳ ವಿಧಗಳು.. ಒಂದಾ ಎರಡಾ.. ಬರೆದಷ್ಟು ಪಟ್ಟಿ ಬೆಳೆಯುತ್ತ ಹೋಗುತ್ತದೆ.
ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ಜೊತೆಗೆ ಆಕರ್ಷಣೆಯು ಆಗುವ ಹಾಗೇ ಶಾಲೆಯ ರೂಪವನ್ನೇ ಬದಲಿ ಮಾಡಿದ್ದಾರೆ. ಲಾಕ್ ಡೌನ್ ಸಮಯದಲ್ಲಿಯೂ ವಿದ್ಯಾರ್ಥಿಗಳ ಮನಸ್ಸು ಗೆಲ್ಲುವ ಹಾಗೇ ಮಾಡುತ್ತಿರುವ ಇಂತಹ ಶಿಕ್ಷಕರಿಗೆ ಇಲಾಖೆ ಪುರಸ್ಕರಿಸಬೇಕಿದೆ ಅಲ್ಲವೇ..