ಒಂದೂವರೆವರೆಗೂ ಡಿಸಿಪಿ ಕೃಷ್ಣಕಾಂತ ಕಮರಿಪೇಟೆ ಠಾಣೆಯಲ್ಲಿ: ನಡೆದದ್ದೇನು ಗೊತ್ತಾ.. ಎಕ್ಸಕೂಸಿವ್ ವೀಡಿಯೋ

ಹುಬ್ಬಳ್ಳಿ: ಕಮರಿಪೇಟೆಯ ದಿವಟೆಗಲ್ಲಿಯಲ್ಲಿ ನಡೆದಿದ್ದ ರೌಡಿಸಂನ ಸಿಸಿಟಿವಿ ದೃಶ್ಯಾವಳಿಗಳು ಹೊರಗೆ ಬಿದ್ದ ನಂತರ ಪೊಲೀಸ್ ಇಲಾಖೆಯಲ್ಲಿ ಹೊಸತನ ಮೂಡಿದೆ. ಇನ್ಸ್ ಪೆಕ್ಟರಗೂ ಗೊತ್ತಿಲ್ಲದ ಡಿಸಿಪಿ ಕೃಷ್ಣಕಾಂತ ಬಂದು ತನಿಖೆ ನಡೆಸಿದ ಘಟನೆ ನಡೆಯಿತು.
ಅರುಣ ಹಚಡದ ಮನೆಯ ಮೇಲೆ ರೌಡಿ ಪಡೆಯನ್ನಿಟ್ಟುಕೊಂಡು ಬಂದಿದ್ದ ಯಲ್ಲಪ್ಪ ಬದ್ದಿ ಮೇಲೆ ಪ್ರಕರಣ ದಾಖಲು ಮಾಡುವಂತೆ ಪೊಲೀಸರನ್ನ ಕೇಳಿಕೊಂಡರೂ ಕಮರಿಪೇಟೆ ಠಾಣೆಯ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿರಲಿಲ್ಲ. ಆ ಕಾರಣಕ್ಕೆ ನ್ಯಾಯ ಕೊಡಿಸುವಂತೆ ಅನೇಕರನ್ನ ಅರುಣ ಕೇಳಿಕೊಂಡಿದ್ದ ಮತ್ತೂ ನಡೆದಿರುವ ಘಟನೆಯ ಸಿಸಿಟಿವಿ ದೃಶ್ಯಗಳನ್ನು ನೀಡಿದ್ದ.
ಮೊನ್ನೆಯಷ್ಟೇ ಗೃಹ ಸಚಿವರು ಎಚ್ಚರಿಕೆ ಕೊಟ್ಟಿದ್ದರೂ ಕೂಡಾ ಇಂತಹ ಪ್ರಮಾದ ನಡೆಯುತ್ತಿರುವುದನ್ನ ನೋಡಿಕೊಂಡ ಡಿಸಿಪಿ ಕೃಷ್ಣಕಾಂತ ರಾತ್ರೋರಾತ್ರಿ ಕಮರಿಪೇಟೆ ಠಾಣೆಗೆ ಎರಡು ಕಡೆಯವರನ್ನ ಕರೆಸಿ ವಿಚಾರಣೆ ಮಾಡಿದ್ರು.ಸೋಜಿಗವೆಂದರೇ ಡಿಸಿಪಿ ಬರುವುದು ಆ ಠಾಣೆಯ ಇನ್ಸ್ ಪೆಕ್ಟರ್ ಬಸವರಾಜ ಬುದ್ನಿಯವರಿಗೂ ಗೊತ್ತಿಲ್ಲದೇ ಬಂದು ವಿಚಾರಣೆ ನಡೆಸಿದ್ದು.
ಇದೇ ಸಮಯದಲ್ಲಿ ಮಾತನಾಡಿರುವ ಕೃಷ್ಣಕಾಂತ, ನಿಮಗೆ ಎರಡು ದಿನದಲ್ಲಿ ಏನಾಗಿದೆ ಎನ್ನುವುದು ಗೊತ್ತಾಗತ್ತೆ. ಕಾನೂನು ಕೈಗೆ ತೆಗೆದುಕೊಂಡರೇ ಕಾನೂನು ಪ್ರಕಾರ ಕ್ರಮವನ್ನ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಘಟನೆಯ ಬಗ್ಗೆ ಎಫ್ ಆರ್ ಐ ಬಗ್ಗೆ ಕೇಳಿದಾಗ ವಿಚಾರಣೆ ನಡೆಯುತ್ತಿದೆ ಎಂದು ಡಿಸಿಪಿ ಕೃಷ್ಣಕಾಂತ ಹೇಳಿದ್ದಾರೆ.