ಹುಬ್ಬಳ್ಳಿಯಲ್ಲಿ “ಕಾಮನಬಿಲ್ಲಿನ 161”: 10K ಕೊಟ್ರೆ ಎರಡೆರಡು ಮದುವೆಗೂ ಇವರದ್ದೆ ಪೌರೋಹಿತ್ಯ…!!!

ಹುಬ್ಬಳ್ಳಿ: ಹಣಕ್ಕಾಗಿ ಕೆಲವರು ಯಾವ ಮಟ್ಟಕ್ಕಾದರೂ ಹೋಗಲು ಸಿದ್ಧರಾಗಿರುತ್ತಾರೆ ಎಂಬುದಕ್ಕೆ ನಗರದಲ್ಲಿನ ಮೇಧಾವಿ ‘ತ್ರಿ ಸ್ಟಾರ್’ ಓರ್ವನ ಹೊಸ ಭಾಷ್ಯ ಬರೆಯಲು ಮುಂದಾಗಿದ್ದು, ತೀವ್ರ ಚರ್ಚೆಗೆ ಕಾರಣವಾಗಿದೆ.

ನಗರದ ಪ್ರತಿಷ್ಟಿತ ಮನೆತನದಲ್ಲಿ ವ್ಯಕ್ತಿಯೋರ್ವ ತಾನು ಮದುವೆಯಾದ ಮಡದಿಯ ಜೊತೆ ಚೆನ್ನಾಗಿಯೇ ಇದ್ದು, ಸ್ವಂತ ಅವರ ತಂಗಿಯನ್ನ ಪಟಾಯಿಸಿಕೊಂಡು ಹೋಗಿದ್ದು, ಈ ಪ್ರಕರಣದಲ್ಲಿ FIR ಕೂಡಾ ಆಗಿದೆ.
ಆದರೆ, 161 ಕಾಮನಬಿಲ್ಲು ತನ್ನ ಚಿತ್ತಾರವನ್ನ ಬಣ್ಣ ಬಣ್ಣದ ರೂಪದಲ್ಲಿ ತೋರಿಸಿಕೊಳ್ಳುತ್ತಿದೆ. ದೂರು ನೀಡಿದವರಿಂದ ಹಣ ಪಡೆದು, FIR ಮಾಡಿರುವ ಭೂಪ, ಇದೀಗ ಎರಡೆರಡು ಮದುವೆಯಾಗಲು ಸಿದ್ಧವಾಗಿರುವ “ದೋಕೆಬಾಜ್”ನ ಪರವಾಗಿ ನಿಂತಿದ್ದಾರೆಂದು ಹೇಳಲಾಗುತ್ತಿದೆ.
ಕಾಮನಬಿಲ್ಲು ತನ್ವಿದ್ಯೆಯನ್ನ ಮುಂದುವರೆಸಿದ್ದಕ್ಕೆ ಕಾರಣವನ್ನ ನಾಳೆ ಕರ್ನಾಟಕವಾಯ್ಸ್.ಕಾಂ ಸಾಕ್ಷ್ಯ ಸಮೇತ ಮತ್ತಷ್ಟು ಬಿಚ್ಚಡಲಿದೆ.