ಕಲ್ಲೂರಿನ ಜೈಲಾನಿಯನ್ನ ದರೋಡೆ ಮಾಡಿದ “ಕಲ್ಲೂರು, ಇಟಿಗಟ್ಟಿ, ಗೋಪನಕೊಪ್ಪ”ದ ಮೂವರನ್ನ ಹೆಡಮುರಿ ಕಟ್ಟಿದ ಗರಗ ಠಾಣೆ ಪೊಲೀಸರು….

ಧಾರವಾಡ: ಕಲ್ಲೂರ ಕೊಟಬಾಗಿ ರಸ್ತೆಯಲ್ಲಿ ಬೈಕಿನಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನ ನಿಲ್ಲಿಸಿ ಹೊಡೆದು ದರೋಡೆ ಮಾಡಿದ ಪ್ರಕರಣವನ್ನ ಪತ್ತೆ ಹಚ್ಚುವಲ್ಲಿ ಗರಗ ಠಾಣೆಯ ಇನ್ಸಪೆಕ್ಟರ್ ಸಮೀರ ಮುಲ್ಲಾ ನೇತೃತ್ವದ ತಂಡ ಯಶಸ್ವಿಯಾಗಿದೆ.
ಫೆಬ್ರವರಿ ಮೂರರಂದು ರಾತ್ರಿ ಬೈಕಿನಲ್ಲಿ ಹೋಗುತ್ತಿದ್ದ ಜೈಲಾನಿ ಸೈಯದನವರ ತಡೆದು ಹಲ್ಲೆ ಮಾಡಿ ಆತನ ಬಂಗಾರದ ಚೈನ್, ಮೊಬೈಲ್ ಹಾಗೂ ಹಣವನ್ನ ದೋಚಿ ಪರಾರಿಯಾಗಿದ್ದರು.
ಪ್ರಕರಣ ದಾಖಲು ಮಾಡಿಕೊಂಡಿದ್ದ ಗರಗ ಠಾಣೆಯ ಪೊಲೀಸರು, ಚಾಣಾಕ್ಷತನದಿಂದ ಆರೋಪಿಗಳನ್ನ ಬಂಧಿಸಿದ್ದು, ಆರೋಪಿಗಳನ್ನ ಕಲ್ಲೂರ ಗ್ರಾಮದ ರವಿ ಗುಂಡಬಸಪ್ಪ ದಂಡಿನ, ಇಟಿಗಟ್ಟಿಯ ಶಂಕರ ಕೊಟಾಟೆ ಹಾಗೂ ಗೋಪನಕೊಪ್ಪದ ದೀಪಕ ಗೊಲ್ಲರ ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ 60 ಸಾವಿರ ರೂಪಾಯಿ ಮೌಲ್ಯದ ಚೈನ್, ಮೊಬೈಲ್ ಹಾಗೂ ದರೋಡೆ ಮಾಡಲು ಬಳಕೆ ಮಾಡಿದ ಬೈಕ್‌ನ್ನ ವಶಕ್ಕೆ ಪಡೆಯಲಾಗಿದೆ.
ಸಿಪಿಐ ಸಮೀರ ಮುಲ್ಲಾ ನೇತೃತ್ವದಲ್ಲಿ ಪುಎಸ್ಐ ಸಿದ್ರಾಮಪ್ಪ ಉನ್ನದ, ಎಫ್.ಎಂ.ಮಂಟೂರ, ಎಫ್.ಬಿ.ಪಾಟೀಲ, ಎಸ್.ಎ.ರಾಮನಗೌಡರ, ಮೋಹನ ಪಾಟೀಲ, ಮಂಜುನಾಥ ಕೆಲಗೇರಿ, ಬಿ.ಪಿ.ದೂಪದಾಳ, ಉಳವೀಶ ಸಂಪಗಾವಿ, ಈರಪ್ಪ ಲಮಾಣಿ, ಪ್ರಸಾದ ಬಡಿಗೇರ, ತಾಂತ್ರಿಕ ವರ್ಗದ ಆರೀಫ ಗೋಲಂದಾಜ, ಚೇತನ ಮಾಳಗಿ ಪ್ರಕರಣ ಪತ್ತೆ ಹಚ್ವುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.