ಧಾರವಾಡ: ಕಲ್ಲೆ ಗ್ರಾಮದಲ್ಲಿ ಸಿಲೆಂಡರ್ ಸ್ಪೋಟ್- ಸುಟ್ಟು ಕರಕಲಾದ ಮಹಿಳೆ…!

ಧಾರವಾಡ: ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗಲೇ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಮಹಿಳೆಯೊಬ್ಬಳು ಸುಟ್ಟು ಕರಕಲಾದ ಘಟನೆ ತಾಲೂಕಿನ ಕಲ್ಲೆ ಗ್ರಾಮದಲ್ಲಿ ಸಂಭವಿಸಿದೆ.
ಗರಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆಯಲ್ಲಿ 30 ವರ್ಷದ ಮಹಾದೇವಿ ಸುರೇಶ ವಗೇಣ್ಣನವರ ಸಾವಿಗೀಡಾಗಿದ್ದು, ಕುಟುಂಬದ ಚಿನ್ನಪ್ಪ ಗಂಗಪ್ಪ ವಗೇಣ್ಣನವರ, ಸುರೇಶ ಚಿನ್ನಪ್ಪ ವಗೇಣ್ಣನವರ, ಗಂಗವ್ವ ಚಿನ್ನಪ್ಪ ವಗೇಣ್ಣನವರ, ಶ್ರೀಧರ ಸುರೇಶ ವಗೇಣ್ಣನವರ ತೀವ್ರವಾಗಿ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನ ಚಿಕಿತ್ಸೆಗಾಗಿ ಧಾರವಾಡದ ಸರಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಪ್ರಕರಣವನ್ನ ಪೊಲೀಸರು ದಾಖಲು ಮಾಡಿಕೊಂಡು ಮುಂದಿನ ಕ್ರಮವನ್ನ ಜರುಗಿಸಿದ್ದಾರೆ.