ಆರಂಭವಾಗದ ಮಧ್ಯ ಮಾರಾಟ: ನಿಲ್ಲದ ಕಳ್ಳಭಟ್ಟಿ ವ್ಯವಹಾರ

ಬೀದರ: ಮಧ್ಯದ ಅಮಲಿನಲ್ಲಿ ಹೊಯ್ದಾಡುವ ಜನರು ಇದೀಗ ಕಳ್ಳಭಟ್ಟಿಯತ್ತ ವಾಲುತ್ತಿರುವುದರಿಂದ ಪ್ರಕರಣಗಳು ಹೆಚ್ಚಾಗತೊಡಗಿವೆ. ಬಾಲ್ಕಿಯ ಧನ್ನೂಅಲರಾ ತಾಂಡಾದಲ್ಲಿ ಪೊಲೀಸರು ದಾಳಿ ನಡೆಸಿದ್ದು, ಸಾವಿರಾರೂ ರೂಪಾಯಿ ಮೌಲ್ಯದ ಮಧ್ಯಸಾರವನ್ನ ನಾಶ ಮಾಡಿದ್ದಾರೆ.
ಕಳ್ಳಭ ಟ್ಟಿ ವ್ಯವಹಾರ ಸಂಪೂರ್ಣವಾಗಿ ಕಡಿಮೆಯಾಗಿತ್ತು. ಆದರೀಗ, ಸರಕಾರ ಮಾರಾಟ ಸ್ಥಗಿತಗೊಳಿಸಿದ್ದರಿಂದ ಕಳ್ಳಭಟ್ಟಿ ಅವ್ಯಾಹತವಾಗಿ ನಡೆಯುತ್ತಿದೆ. ಹಾಗಾಗಿಯೇ ಪೊಲೀಸರಿಗೆ ಮತ್ತೊಂದು ತಲೆ ನೋವು ಆರಂಭವಾಗಿದೆ. ಈ ತಾಂಡಾದಲ್ಲಿ ನಡೆದ ದಾಳಿಯಲ್ಲಿ 400 ಲೀಟರ್ ಕಳ್ಳಭಟ್ಟಿಯನ್ನ ನಾಶ ಮಾಡಿದ್ದಾರೆ.