EXCLUSIVE-ಹುಬ್ಬಳ್ಳಿ ಆನಂದನಗರದಲ್ಲಿ ಕಿರಾಣಿ ಅಂಗಡಿ: ಓಂ ನಮಃ ಶಿವಾಯ

ಹುಬ್ಬಳ್ಳಿ: ಕೊರೋನಾ ಸಮಯದಲ್ಲಿ ಕಳ್ಳರು ಹೊಸ ಹೊಸ ದಾರಿಗಳನ್ನ ಹುಡುಕುತ್ತಿದ್ದು ಕಿರಾಣಿ ಅಂಗಡಿಯನ್ನೂ ಟಾರ್ಗೆಟ್ ಮಾಡುತ್ತಿದ್ದಾರೆಂಬುದು ಆನಂದನಗರದಲ್ಲಿ ನಡೆದಿರುವ ಕಳ್ಳತನವೊಂದು ಸಿಸಿಟಿವಿ ಮೂಲಕ ಜಗಜ್ಜಾಹೀರು ಮಾಡಿದೆ.
ಕಳೆದ ರಾತ್ರಿ ಮೂರು ಗಂಟೆಗೆ ಅಂಗಡಿ ಒಳಗೆ ಕಿಟಕಿಯ ಗ್ರೀಲ್ ಮುರಿದು ಒಳನುಗ್ಗಿರುವ ಕಳ್ಳ, ತನಗೆ ಬೇಕಾದ ವಸ್ತುಗಳನ್ನ ಹಾಗೂ ಲಾಕರಿನಲ್ಲಿದ್ದ ಹಣವನ್ನ ದೋಚಿ ಪರಾರಿಯಾಗಿದ್ದಾನೆ.
ಕಬ್ಬಿಣದ ಗ್ರೀಲ್ ಮುರಿದು ಒಳಗೆ ಬಂದು ಎಲ್ಲವನ್ನೂ ನೋಡುತ್ತಿದ್ದಾಗಲೇ ಸಿಸಿಟಿವಿ ಕೂಡಾ ಕಳ್ಳನಿಗೆ ಕಂಡು ಬಂದಿದೆ. ತಕ್ಷಣವೇ ಅದರ ಕೇಬಲ್ ಕಟ್ ಮಾಡಿದ್ದಾನೆಯಾದರೂ, ಅಲ್ಲಿಯವರೆಗೆ ಆತ ನಡೆದುಕೊಂಡು ಎಲ್ಲವೂ ರೆಕಾರ್ಡ್ ಆಗಿರುವುದು ಅವನಿಗೆ ತಿಳಿದಿಲ್ಲ.
ಲಾಕರನಲ್ಲಿ ಎಷ್ಟು ಹಣವಿತ್ತು ಎಂಬುದು ಇನ್ನೂ ಗೊತ್ತಾಗಿಲ್ಲ. ಆನಂದ ನಗರ ರಸ್ತೆಯಲ್ಲಿರುವ ಬೃಂದಾವನ ಟ್ರೇಡರ್ಸನಲ್ಲಿ ನಡೆದಿರುವ ಈ ಘಟನೆಯ ಬಗ್ಗೆ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.