ಲಿಂಗ ಬದಲಿಗಾಗಿ ಕಳ್ಳತನ ಮಾಡಿದ ತೃತೀಯಲಿಂಗಿ: ಪೊಲೀಸರ ವಶದಲ್ಲಿ

ವಿಜಯಪುರ: ತೃತೀಯಲಿಂಗಿಯೋರ್ವ ಬಟ್ಟೆ ಶೋರೂಂ ಕದಿಯಲು ಹೋಗಿ, ಗೂರ್ಖಾನ ಬಳಿ ಸಿಕ್ಕ ಘಟನೆಯೊಂದು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ಸಂಭವಿಸಿದೆ.
ಕೊಪ್ಪಳ ಮೂಲದ ತೃತೀಯಲಿಂಗಿ ರಾಯಣ್ಣ ಭೀಮಪ್ಪ ಜೋಶಿಯಿಂದ ತಡರಾತ್ರಿ ಶೆಟರ್‌ನ ಬೀಗ ಮುರಿದು ಬಟ್ಟೆ ಶೋರುಂ ದೋಚಲು ಪ್ರಯತ್ನಿಸುತ್ತಿದ್ದ. ಬೆಲೆ ಬಾಳುವ ಬಟ್ಟೆ, ಹಣ ಕಳ್ಳತನಕ್ಕೆ ಯತ್ನಿಸಿದ ತೃತೀಯ ಲಿಂಗಿ ರಾಯಣ್ಣ ಜೋಶಿ.
ತಡರಾತ್ರಿ ಶೋ ರೂಂಗೆ ನುಗ್ಗಿ ಬೆಲೆ ಬಾಳುವ ಬಟ್ಟೆಗಳನ್ನ ಗಂಟು ಕಟ್ಟುತ್ತಿದ್ದ. ರಾತ್ರಿ ಗಸ್ತಿನಲ್ಲಿದ್ದ ಗೂರ್ಖಾ ಸಮಯ ಪ್ರಜ್ಞೆಯಿಂದ ಕಳ್ಳತನ ವಿಫಲವಾಗಿದೆ. ತಡರಾತ್ರಿ ಶೋ ರೂಂ ಶೆಟರ್ ಬಾಗಿಲು ಬೀಗ ಮುರಿದಿದ್ದನ್ನ ಗೂರ್ಖಾ ಗಮನಿಸಿದ್ದ.
ಮೊದಲು ಮಾಲೀಕ ಮಹಾವೀರಗೆ ಮಾಹಿತಿ ನೀಡಿದ ಗೂರ್ಖಾ, ಬಳಿಕ ಶೋ ರೂಂ ಒಳಗೆ ನುಗ್ಗಿ ತೃತೀಯ ಲಿಂಗಿಯನ್ನ ಹಿಡಿದಿಟ್ಟು ದಿಟ್ಟತನ ಪ್ರದರ್ಶಿಸಿದ ಗೂರ್ಖಾ. ಕಳ್ಳತನಕ್ಕೆ ಯತ್ನಿಸಿದ ರಾಯಣ್ಣ ಜೋಶಿ ಮುದ್ದೇಬಿಹಾಳ ಪೊಲೀಸ್ ವಶಕ್ಕೆ.
ಸಾಹಸ ಮೆರೆದ ಗೂರ್ಖಾಗೆ ಅಭಿನಂದಿಸಿದ ಶೋ ರೂಂ ಮಾಲೀಕ ಮಹಾವೀರ. ಲಿಂಗ ಬದಲಾವಣೆಗಾಗಿ ಕಳ್ಳತನಕ್ಕೆ ಇಳಿದಿದ್ದ ಎನ್ನುವ ಮಾಹಿತಿ ಬಹಿರಂಗ.