ಮುಚ್ಚಿದ ದೇವಸ್ಥಾನದ ಹುಂಡಿ ಕಳ್ಳತನ: ಕೊರೋನಾ ಸಮಯವನ್ನೂ ಬಿಡದ ಚೋರರು

ಹಾವೇರಿ: ಕರೋನಾ ಕೋವಿಡ್ ಭೀತಿ ಹಿನ್ನೆಲೆಯಲ್ಲಿ ತಿಂಗಳಿನಿಂದ ಬಾಗಿಲು ಮುಚ್ಚಿದ ದೇವಸ್ಥಾನಗಳನ್ನೇ ಟಾರ್ಗೆಟ್ ಮಾಡಿರುವ ಚೋರರು, ಜಿಲ್ಲೆಯ ರಾಣೆಬೆನ್ನೂರು ನಗರದಲ್ಲಿನ ಶಕ್ತಿ ದೇವತೆ ಚೌಡೇಶ್ವರಿ ದೇವಿ ಅಮ್ಮನವರ ದೇವಸ್ಥಾನದಲ್ಲಿ ಹುಂಡಿ ಕಳ್ಳತನ ಮಾಡಿದ್ದಾರೆ.
ದೇವಸ್ಥಾನ ದ ಬಳಿ ಭಕ್ತರು ಬಾರದೇ ಇರುವುದನ್ನೇ ಕಳ್ಳರು ಬಳಕೆ ಮಾಡಿಕೊಂಡು ತಮ್ಮ ಕೈ ಚಳಕ ತೋರಿಸಿದ್ದಾರೆ. ದೇವಸ್ಥಾನದ ಬಾಗಿಲು ಮುರಿದು, ಸಿಸಿ ಕ್ಯಾಮರಾ ದ್ವಂಸ ಮಾಡಿ ಕಳ್ಳತನ ಮಾಡಿದ್ದಾರೆ.ಲಕ್ಷಾಂತರ ರೂಪಾಯಿ ಕಳ್ಳತನ ಮಾಡಿರುವ ಶಂಕೆವ್ಯಕ್ತವಾಗಿದ್ದು, ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.