ಅವರಾಗಲೇ ಕಲಘಟಗಿಗೆ ಜ್ವಾಯಿನ್ ಆಗಿ ಎಂಎಲ್ಎಗೂ ಭೇಟಿಯಾದ್ರೂ..!

ಧಾರವಾಡ: ಜಿಲ್ಲೆಯ ಕಲಘಟಗಿ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡ ಪೊಲೀಸ್ ಇನ್ಸಪೆಕ್ಟರ್ ಅಧಿಕಾರ ವಹಿಸಿಕೊಂಡಿದ್ದು, ಸ್ಥಳೀಯರು ಆತ್ಮೀಯಿತೆಯಿಂದ ಬರಮಾಡಿಕೊಂಡರು.
ನವನಗರ ಎಪಿಎಂಸಿ ಠಾಣೆಯಲ್ಲಿದ್ದ ಪ್ರಭು ಸೂರಿನ್ ಅವರು, ವಕೀಲರೊಂದಿಗೆ ನಡೆದ ಗಲಾಟೆಯಲ್ಲಿ ಠಾಣೆಯನ್ನ ಬಿಟ್ಟು ಪೊಲೀಸ್ ಕಮೀಷನರ್ ಕಚೇರಿಯಲ್ಲಿ ಕರ್ತವ್ಯ ನಿರ್ವಹಣೆ ಮಾಡುವಂತಾಗಿತ್ತು. ಅಷ್ಟೇ ಅಲ್ಲ, ವಕೀಲರ ಸಭೆಯಲ್ಲಿ ಕ್ಷಮೆ ಕೇಳಿದ್ದರೂ ಕೂಡಾ.
ಇದೀಗ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಅಧಿಕಾರ ಸ್ವೀಕಾರ ಮಾಡಿದ್ದು, ಧಾರವಾಡಕ್ಕೆ ಬಂದ ವಿಜಯ ಬಿರಾದಾರ ಸ್ಥಾನವನ್ನ ಪ್ರಭು ಸೂರಿನ್ ಇನ್ನೂ ಮುಂದೆ ತುಂಬಬೇಕಿದೆ. ಏಕೆಂದರೇ, ಕಳೆದ ಮೂರುವರೆ ವರ್ಷದಿಂದ ಬಿರಾದಾರ, ತಮ್ಮದೇ ಆದ ರೀತಿಯಲ್ಲಿ ಕರ್ತವ್ಯ ನಿರ್ವಹಣೆ ಮಾಡಿದ್ದಾರೆ.
ಅಧಿಕಾರ ವಹಿಸಿಕೊಂಡ ದಿನವೇ ಶಾಸಕ ಸಿ.ಎಂ.ನಿಂಬಣ್ಣನವರನ್ನ ಭೇಟಿಯಾಗಿ, ಅಭಿನಂದನೆಯನ್ನ ತಿಳಿಸಿದರು. ಈ ಸಮಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಶಾಸಕರು ಹೇಳಿದರು.