ಸಂತೋಷ ಲಾಡ ಗುಣಗಾನ ಮಾಡಿದ ಶಾಸಕ ಸಿ.ಎಂ.ನಿಂಬಣ್ಣನವರ- ಕಾರ್ಡಲ್ಲಿ ಹೆಸರು ಹಾಕದವರು.. ವೇದಿಕೆಯಲ್ಲಿ ಹೊಗಳಿದರು..!

ಧಾರವಾಡ: ಜಿಲ್ಲೆಯ ಕಲಘಟಗಿ ಪಟ್ಟಣದಲ್ಲಿ ಇಂದು ನೂತನವಾಗಿ ನಿರ್ಮಾಣಗೊಂಡಿದ್ದ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಡೀಪೊವನ್ನ ಉದ್ಘಾಟನೆ ಮಾಡಲಾಯಿತು.
ಡೀಪೊದ ಕಲ್ಪನೆ ಹೊಂದಿದ್ದ ಮಾಜಿ ಸಚಿವ ಸಂತೋಷ ಲಾಡ ಅವರನ್ನ ಕಾರ್ಯಕ್ರಮಕ್ಕೆ ಆಹ್ವಾನ ನೀಡದೇ ಇರುವುದಕ್ಕೆ ತಾಲೂಕಿನಲ್ಲಿ ಅಪಸ್ವರ ಕೇಳಿ ಬಂದಿತ್ತು. ಅಷ್ಟೇ ಅಲ್ಲ, ಶಾಸಕ ಸಿ.ಎಂ.ನಿಂಬಣ್ಣನವರ ರಾಜಕೀಯ ಮಾಡುತ್ತಿದ್ದಾರೆಂದು ಹಲವರು ದೂರಿದ್ದರು.
ಸೋಜಿಗವೆಂದರೇ, ಆಹ್ವಾನ ಪತ್ರಿಕೆಯಲ್ಲಿ ಹೆಸರನ್ನೂ ಹಾಕದೇ ಇದ್ದ ಸಂತೋಷ ಲಾಡ ಅವರ ಬಗ್ಗೆ ವೇದಿಕೆಯಲ್ಲಿ ಶಾಸಕ ಸಿ.ಎಂ.ನಿಂಬಣ್ಣನವರ ಗುಣಗಾನ ಮಾಡಿದರು. ಅಷ್ಟೇ ಅಲ್ಲ, ಸತ್ಯವನ್ನ ಕೂಡಾ ಒಪ್ಪಿಕೊಂಡರು. ಈ ಡೀಪೋ ಮಾಡಲು ಸಂತೋಷ ಲಾಡರವನೇ ಭೂಮಿ ಪೂಜೆ ಮಾಡಿ, ಹಣವನ್ನ ಬಿಡುಗಡೆಗೊಳಿಸಿದ್ದರೆಂದು ಹೇಳುವ ಮೂಲಕ, ಸಂತೋಷ ಲಾಡರ ಸ್ಮರಣೆಯನ್ನ ಮಾಡಿದ್ರು.
ಶಾಸಕರ ಈ ಮಾತಿನಿಂದ ಹಲವರು ಕಿಸಿಕಿಸಿ ನಗುತ್ತಿದ್ದರೆಂದು ಹೇಳಲಾಗುತ್ತಿದೆ, ಯಾಕಂದ್ರೇ, ಊರು ಸುತ್ತಿ ಬರುವವರಿಗೂ ಹನಮಪ್ಪನ ನೆನಪಾಗಲಿಲ್ಲ, ಊರ ಹೊರಗ್ ಬಂದ್ ಗಳೇನ್ ಹನಮಪ್ಪನ್ ನೆನಪ್ ಆಗೇತಲ್ಲರೀ ಮಾಸ್ತರ್ ಗ್ ಎಂದು ನಸುನಗುತ್ತಿದ್ದರಂತೆ..
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮೂಲಭೂತ ಸೌಕರ್ಯ ನಿಗಮದ ಅಧ್ಯಕ್ಷರೂ ಆಗಿರುವ ನವಲಗುಂದ ಶಾಸಕ ಶಂಕರ ಪಾಟೀಲಮುನೇನಕೊಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.