Posts Slider

Karnataka Voice

Latest Kannada News

ಕಲಘಟಗಿ ನೂತನ ಬಸ್ ಡೀಪೋ ಉದ್ಘಾಟನೆ: ಮಾಡಿದ್ದವರನ್ನೂ ನೆನೆಯೋ ಮಂಕುತಿಮ್ಮ..

1 min read
Spread the love

ಪ್ರಸ್ತಾಪಿಸಿದ್ದು ಸಚಿವ ಸಂತೋಷ ಲಾಡ್ ಅನುಯಾಯಿ ಆನಂದ ಕಲಾಲ, ಅವರಾಗ ಸಂಸ್ಥೆಯ ನಿರ್ದೇಶಕರಾಗಿದ್ದರು.. ಪಕ್ಕಾ ಡಾಕುಮೆಂಟ್ ಜೊತೆಗೆ ವರದಿ

ಧಾರವಾಡ: ಜಿಲ್ಲೆಯ ಕಲಘಟಗಿ ಪಟ್ಟಣದಲ್ಲಿ ಹೊಸದೊಂದು ಬಸ್ ಘಟಕ ನಿರ್ಮಾಣ ಮಾಡಬೇಕೆಂದು ಮೊದಲು ಪ್ರಸ್ತಾಪ ಯಾರೂ ಮಾಡಿದ್ದರೂ ಮತ್ತೂ ಇಂದು ಅವರೆಲ್ಲರನ್ನೂ ಮರೆಯುವ ಪ್ರಯತ್ನವನ್ನ ಮಾಡಲಾಗಿದೆ ಎಂಬ ಕೂಗು ತಾಲೂಕಿನಲ್ಲಿ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಸಮಗ್ರವಾದ ಮಾಹಿತಿಯನ್ನ ನೀಡುವ ಪ್ರಯತ್ನವನ್ನ ನಿಮ್ಮ ಕರ್ನಾಟಕವಾಯ್ಸ್.ಕಾಂ ನಿಮಗೆ ನೀಡುತ್ತಿದೆ.

ಹಾಲಿ ಶಾಸಕ ಸಿ.ಎಂ.ನಿಂಬಣ್ಣನವರ ಜನೇವರಿ 23ರಂದು ನೂತನ ಬಸ್ ಘಟಕವನ್ನ ಉದ್ಘಾಟನೆ ಮಾಡುತ್ತಿದ್ದಾರೆ. ಆದರೆ, ಅದಕ್ಕೆ ಕಾರಣಿಭೂತರಾದವರನ್ನ ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂಬುದು ಬಹುತೇಕರ ಬೇಸರಕ್ಕೆ ಕಾರಣವಾಗಿದೆ. ಹಾಗಾದ್ರೇ, ಇಡೀ ಪ್ರಕ್ರಿಯೆ ಹೇಗೆ ಬಂತು ಎಂಬುದನ್ನ ನೀವೋಮ್ಮೆ ನೋಡಿ.

ಈ ಪತ್ರವನ್ನ ಸರಿಯಾಗಿ ನೀವೋಮ್ಮೆ ಗಮನಿಸಿದರೇ ಸತ್ಯದ ಸಾಕ್ಷಿಗಳು ದೊರಕತೊಡಗುತ್ತವೆ. ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ನಿರ್ದೇಶಕರಾಗಿದ್ದ ಸಂತೋಷ ಲಾಡ ಅವರ ಅನುಯಾಯಿಯಾಗಿರುವ ಆನಂದ ಕಲಾಲ, ಕಲಘಟಗಿಗೆ ಬಸ್ ಘಟಕ ಬೇಕು ಎಂದು ಮೊದಲು ಪ್ರಸ್ತಾಪ ಮಾಡಿದ್ದು.

ಅಂದು ನಡೆದ ಸಭೆಯಲ್ಲಿ ನಡೆದ ನಡಾವಳಿಗಳ ಸಾಕ್ಷಿಗಳು ಕರ್ನಾಟಕವಾಯ್ಸ್.ಕಾಂ ಗೆ ಲಭಿಸಿವೆ. ಇದೇ ಕಾರಣಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಬೇಸರಗೊಂಡಿದ್ದಾರೆ. ಮಾಜಿ ಸಚಿವ ಸಂತೋಷ ಲಾಡ ಅವರನ್ನ ಉದ್ಘಾಟನೆಗೆ ಕರೆಯದೇ ಇರುವುದು ಹಾಲಿ ಶಾಸಕ ಸಿ.ಎಂ.ನಿಂಬಣ್ಣನವರ ರಾಜಕೀಯವನ್ನ ತೋರಿಸತ್ತೆ ಎನ್ನುವುದು ಸಾಮಾನ್ಯ ಜನರ ಅಭಿಪ್ರಾಯ.

ಇನ್ನೇನು ಎರಡು ದಿನದಲ್ಲಿ ನೂತನವಾಗಿ ನಿರ್ಮಾಣವಾದ ಬಸ್ ಘಟಕ ಉದ್ಘಾಟನೆಯಾಗತ್ತೆ ಮತ್ತೂ ಅದನ್ನ ತಾವೂ ಮಾಡಿದೇವು ಎಂದು ಕಲ್ಲಿನಲ್ಲಿ ಹೆಸರು ಬರೆಸಿಕೊಳ್ಳುವ ಮುನ್ನ, ಮನಸ್ಸಲ್ಲಿಯಾದರೂ ಕಲ್ಲಿನಲ್ಲಿ ಹೆಸರು ಬರೆಸಿಕೊಳ್ಳಲು ಕಾರಣರಾದವರು ಯಾರೂ ಎಂಬುದನ್ನ ಅರಿಯಬೇಕಾಗಿದೆಯಲ್ಲವೇ..!


Spread the love

Leave a Reply

Your email address will not be published. Required fields are marked *