ಕಲಘಟಗಿಯಲ್ಲಿ “ಸರಕಾರಿ ಸಾಲೀ ಸರ್” ರಾಜಕೀಯ: ಶಿಕ್ಷಣ ಇಲಾಖೆಯ ಸ್ಥಿತಿ ಎಲ್ಲಿಗೆ ಬಂತು…!!

ಹಳ್ಳಿ ರಾಜಕೀಯದಲ್ಲಿ “ಮಾಸ್ತರ್” ಉಸಾಬರಿ: ಡಿಡಿಪಿಐ ಅವರೇ ನೀವೇನಂತೀರಿ…!?
ಧಾರವಾಡ: ಸರಕಾರದ ನೌಕರಿ ಮಾಡುವ ಯಾರೇ ಆಗಲಿ ಅವರಿಗೊಂದಿಷ್ಟು ಸಾಮಾಜಿಕ ಬದ್ಧತೆ ಮತ್ತೂ ಸರಕಾರದ ನಿಯಮಗಳ ಪಾಲನೆ ಅವಶ್ಯವಿರತ್ತೆ. ಆದರೆ, ಇಲ್ಲೊಬ್ಬ ಶಿಕ್ಷಕರಿಗೆ ಅದ್ಯಾವುದು ಇಲ್ಲ ಅನಿಸತ್ತೆ.
ಇದು ಕಲಘಟಗಿ ತಾಲೂಕಿನ ಗ್ರಾಮವೊಂದರಲ್ಲಿ ನಡೆದ ಸಭೆಯಲ್ಲಿ ಹಳಿಯಾಳ ತಾಲೂಕಿನ ಕೆ.ಕೆ.ಹಳ್ಳಿಯ ಸರಕಾರಿ ಶಾಲೆಯ ಶಿಕ್ಷಕ ಮೈಲಾರಿ ಕಬ್ಬೂರ ಹೇಗೆ ಮಾತಾಡ್ತಾರೆ ಎಂಬುದನ್ನು ಒಮ್ಮೆ ನೋಡಿ ಬಿಡಿ.
ಕಲಘಟಗಿ ತಾಲೂಕಿನಲ್ಲಿ ಜೆಜೆಎಂ ಕಾಮಗಾರಿ ಸರಿಯಾದ ರೀತಿಯಲ್ಲಿ ನಡೆಸಲು ಅವಕಾಶ ನೀಡಬೇಕೆಂದು ಎಇಇ ಕೇಳುತ್ತಿದ್ದಾಗಲೂ ಶಿಕ್ಷಕ ಮಹಾಶಯರು, ನಡೆದುಕೊಂಡಿದ್ದು ಅಚ್ಚರಿ ಮೂಡಿಸಿದೆ. ಉತ್ತರ ಕನ್ನಡ ಡಿಡಿಪಿಐ ಅವರು ಈ ಬಗ್ಗೆ ಗಮನ ಹರಿಸಬೇಕಿದೆ.