“ಹಂತಕ ಫಯಾಜ್‌ಗೆ ಗಲ್ಲಿಗೇರಿಸಿ” : ಕಲಘಟಗಿಯಲ್ಲಿ ಮಾರ್ಧನಿಸಿದ ಅಂಜುಮನ್ ಸಂಸ್ಥೆಯ ಕೂಗು…!!!

ಕಲಘಟಗಿ: ವಿದ್ಯಾರ್ಥಿನಿಯಾಗಿದ್ದ ನೇಹಾ ಹಿರೇಮಠಳನ್ನ ಹತ್ಯೆಗೈದ ಫಯಾಜ್ ಕೊಂಡಿಕೊಪ್ಪನಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಕಲಘಟಗಿ ಅಂಜುಮನ್ ಸಂಸ್ಥೆಯು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು.
ಕ್ರೌರ್ಯದ ಪರಮಾವಧಿಗೆ ತಲುಪಿರುವ ಇಂತವರಿಗೆ ಗಲ್ಲಿಗೇರಿಸುವ ಮೂಲಕ ಉತ್ತಮಸಮಾಜದ ನಿರ್ಮಾಣ ಮಾಡಬೇಕೆಂಬ ಉದ್ದೇಶದಿಂದ ಪ್ರತಿಭಟನೆ ನಡೆಯಿತು.
ವೀಡಿಯೋ..
ಪಟ್ಟಣದ ವಿವಿಧ ಪ್ರದೇಶಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು. ಅಂಜುಮನ ಅಧ್ಯಕ್ಷ ಅಜ್ಮತ್ ಜಾಗಿರ್ದಾರ್, ಆಜಾದ್ ಮಲಿಕ್‌ನವರ್, ಸಾಧಿಕ್ ಹೆಬ್ಬಾಳ್,
ಬಾಶಾಸಾಬ್ ಕಲ್ಕೇರಿ, ನಜೀರ್ ಹುಬ್ಬಳ್ಳಿ, ಹಸನ್ ಗಂಜಿಗಟ್ಟಿ, ಶೌಕತ್ ಅಲಿ ಸೇರಿದಂತೆ ತಾಲ್ಲೂಕಿನ ಎಲ್ಲ ಮುಸ್ಲಿಂ ಸಮಾಜ ಮುಖಂಡರು ಭಾಗವಹಿಸಿದ್ದರು.