ಕಲಘಟಗಿ: ಖತರ್‌ನಾಕ್ ಕಳ್ಳನನ್ನ ಹತ್ಯೆಗೈದಿದ್ದ ಇಬ್ಬರನ್ನ “ಅರ್ಧ ಗಂಟೆಯಲ್ಲೆ” ಅಂದರ್ ಮಾಡಿದ ಇನ್ಸಪೆಕ್ಟರ್ ಶ್ರೀಶೈಲ ಕೌಜಲಗಿ ಟೀಂ….!!!
ಖತರ್ನಾಕ್ ಬೈಕ್ ಕಳ್ಳ ವಿಠ್ಠಲನ ಭೀಕರ ಕೊಲೆ ಮಾಡಿ ದೇವಸ್ಥಾನದ ಎದುರು ಎಸೆದು ಹೋಗಿದ್ದವರ ಬಂಧನ
ಕಲಘಟಗಿ: ಹುಬ್ಬಳ್ಳಿ, ಕಲಘಟಗಿ, ತಡಸ ಸೇರಿದಂತೆ ಧಾರವಾಡ ಸುತ್ತಮುತ್ತಲೂ ಬೈಕ್ ಕಳ್ಳತನದಲ್ಲಿ ಕುಖ್ಯಾತಿ ಪಡೆದಿದ್ದವನನ್ನ ಆತನ ಸಂಬಂಧಿಕರೇ ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ ಘಟನೆ ಕಲಘಟಗಿ ತಾಲೂಕಿನ ಹುಣಸಿಕಟ್ಟಿಯಲ್ಲಿ ನಡೆದದ್ದು ಗೊತ್ತಾದ ಅರ್ಧ ಗಂಟೆಯಲ್ಲೆ ಆರೋಪಿಗಳನ್ನ ಬಂಧಿಸುವಲ್ಲಿ ಇನ್ಸಪೆಕ್ಟರ್ ಶ್ರೀಶೈಲ ಕೌಜಲಗಿ ಟೀಂ ಯಶಸ್ವಿಯಾಗಿದೆ.
ಕೊಲೆಯಾದ ವಿಠ್ಠಲ ಬಸಪ್ಪ ಕರಡಿ ಎಂದು ಗುರುತಿಸಲಾಗಿದ್ದು, ಈತ ಹುಬ್ಬಳ್ಳಿಯ, ವಿದ್ಯಾನಗರ, ನವನಗರ, ಹುಬ್ಬಳ್ಳಿ ಗ್ರಾಮೀಣ, ತಡಸ ಸೇರಿದಂತೆ ವಿವಿಧ ಕಡೆಗಳಲ್ಲಿ ಬೈಕ್ ಕಳ್ಳತನ ಮಾಡಿ, ಅವುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ ಆ ದುಡ್ಡಿನಲ್ಲಿ ಮೋಜು ಮಸ್ತಿ ಮಾಡುತ್ತಿದ್ದ.
ಕೊಲೆ ಮಾಡಿದ ಆರೋಪಿಗಳನ್ನ ಪುಂಡಲೀಕ ಭೀಮಪ್ಪ ತೆಗ್ಗಣ್ಣನವರ ಹಾಗೂ ಅಣ್ಣಪ್ಪ ಕುರಡಿ ಎಂದು ಗುರುತಿಸಲಾಗಿದೆ.
ಆದ್ರೆ ನಿನ್ನೇ(ಮಂಗಳವಾರ) ರಾತ್ರಿ ಕಲಘಟಗಿ ತಾಲ್ಲೂಕಿನ ಹುಣಸಿಕಟ್ಟಿ ಗ್ರಾಮದ ಬಳಿಯ ರಸ್ತೆಯ ಪಕ್ಕದಲ್ಲಿ ಕಳ್ಳ ವಿಠ್ಠಲನ ಜೊತೆ ಸಂಬಂಧಿಗಳೇ ಜಗಳ ತೆಗೆದು ಕೊಲೆ ಮಾಡಿದ ಕಿರಾತಕರು ಶವವನ್ನು ರಸ್ತೆಯ ಪಕ್ಕದಲ್ಲೇ ಎಸೆದು ಪರಾರಿಯಾಗಿದ್ದರು.
ಮೂಲತಃ ಕುಂದಗೋಳ ತಾಲ್ಲೂಕಿನ ರಾಮನಕೊಪ್ಪದ ನಿವಾಸಿಯಾಗಿದ್ದ ವಿಠ್ಠಲ ಡ್ರೈವರ್ ವೃತ್ತಿಯನ್ನು ಮಾಡುತ್ತಿದ್ದ, ಆದ್ರೆ ಮೈ ದಣಿಸಿ ದುಡಿಯೋದು ಬಿಟ್ಟು ಸಲೀಸಾಗಿ ಹಣ ಮಾಡುವ ಉದ್ದೇಶದಿಂದ ಕಳ್ಳತನದ ದಾರಿಯನ್ನು ಹಿಡಿದಿದ್ದ.
