ಕಲಘಟಗಿಯ ಹುಲಕೊಪ್ಪದಲ್ಲಿ “ಸೊಸೆ ಸಾವು”- ಮಾವನನ್ನ ಕಂಬಕ್ಕೆ ಕಟ್ಟಿದ ಸಂಬಂಧಿಕರು…!!!

ಕಲಘಟಗಿ: ತನ್ನ ಸೊಸೆಯನ್ನ ನೇಣು ಬಿಗಿದು ಕೊಲೆ ಮಾಡಿದ್ದಾನೆಂದು ಆರೋಪಿಸಿ ವ್ಯಕ್ತಿಯೋರ್ವನನ್ನ ಕಂಬಕ್ಕೆ ಕಟ್ಟಿದ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಹುಲಕೊಪ್ಪ ಗ್ರಾಮದಲ್ಲಿ ಸಂಭವಿಸಿದೆ.
35 ವರ್ಷದ ಸಕ್ಕೂಬಾಯಿ ಎಂಬಾಕೆ ಸಾವಿಗೀಡಾಗಿದ್ದು, ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಾವ ಶಿವಾಜಿ ಕೊಲೆ ಮಾಡಿದ್ದಾನೆಂದು ಆರೋಪಿಸಿ ಸಂಬಂಧಿಕರು ಕಂಬಕ್ಕೆ ಕಟ್ಟಿ ಹಾಕಿದರು.
ನೇಣು ಬಿಗಿದು ಕೊಲೆ ಮಾಡಿದ್ದಾನೆಂದು ಕಣ್ಣೀರು ಹಾಕಿದ ಕುಟುಂಬಸ್ಥರು, ಸಕ್ಕೂಬಾಯಿ ಕತ್ತಿನಲ್ಲಿ ಗಾಯ ಕಂಡು ನೇಣು ಬಿಗಿದು ಕೊಲೆ ಮಾಡಿದ್ದಾನೆಂದು ಆರೋಪಿಸಿದ್ದಾರೆ. ಸ್ಥಳಕ್ಕೆ ಕಲಘಟಗಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿ, ಆರೋಪಿತನನ್ನ ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.