ಕಲಘಟಗಿಯ ಕುರುವಿನಕೊಪ್ಪದಲ್ಲಿ ಮಹಿಳೆಯ ಹತ್ಯೆ, ಮತ್ತೋರ್ವನ ಸ್ಥಿತಿ ಗಂಭೀರ…!!!
1 min readಕಲಘಟಗಿ: ಕಟಾವಿಗೆ ಬಂದಿದ್ದ ಕಬ್ಬನ್ನ ಸಾಗಿಸಲು ಅಡಚಣೆಯಾಗುವ ಉದ್ದೇಶದಿಂದ ನೀರು ಬಿಟ್ಟ ಹಿನ್ನೆಲೆಯಲ್ಲಿ ಆರಂಭವಾದ ಜಗಳ, ಮಹಿಳೆಯೋರ್ವಳ ಹತ್ಯೆಯಲ್ಲಿ ಪರ್ಯಾವಸನಗೊಂಡ ಘಟನೆ ಕಲಘಟಗಿ ತಾಲೂಕಿನ ಕುರುವಿನಕೊಪ್ಪ ಗ್ರಾಮದ ಹೊರವಲಯದಲ್ಲಿ ಸಂಭವಿಸಿದೆ.
ಮೃತ ಮಹಿಳೆಯನ್ನ ಅನಸೂಯಾ ಮಂಜುನಾಥ ಪಾಟೀಲ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಸಚಿನ್ ಪಾಟೀಲ ಎಂಬಾತನಿಗೂ ಗಂಭೀರ ಗಾಯಗಳಾಗಿದ್ದು, ಹೊಡೆದಾಟ ನಡೆಸಿದ ಬಸಪ್ಪ ಪಾಟೀಲ ಮತ್ತು ಮೈಲಾರಿ ಪಾಟೀಲ ಕೂಡಾ ಗಾಯಗೊಂಡಿದ್ದು, ಕಿಮ್ಸಗೆ ರವಾನೆ ಮಾಡಲಾಗಿದೆ.
ಮೈಲಾರಿ ಮತ್ತು ಬಸಪ್ಪ ಪಾಟೀಲ ಅವರಿಗೆ ಸೇರಿದ ಕಬ್ಬು ಕಟಾವಿಗೆ ಬಂದಿತ್ತಂತೆ. ಪಕ್ಕದ ಹೊಲದ ಮೂಲಕ ಹಾದು ಹೋಗಬೇಕಿತ್ತು. ಆದರೆ, ಅದೇ ಹೊಲದಲ್ಲಿ ನೀರು ಬಿಡುತ್ತಿದ್ದು, ಕಬ್ಬು ಹೊರಗೆ ಸ್ಥಿತಿ ನಿರ್ಮಾಣವಾಗಿತ್ತು.
ಇದೇ ಕಾರಣಕ್ಕೆ ಘರ್ಷಣೆ ನಡೆದ ಹಿನ್ನೆಲೆಯಲ್ಲಿ ಕೊಲೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.