ಕಲಘಟಗಿ: ಲವ್ ಮಾಡಿ ಮದುವೆಯಾದ, ಅತ್ತೆಯನ್ನ ಕತ್ತರಿಸಿ ಕೊಂದ…!!!

ಹುಬ್ಬಳ್ಳಿ: ತನ್ನ ಹಾಗೂ ಹೆಂಡತಿಯ ನಡುವೆ ಅತ್ತೆ ಜಗಳ ಹಚ್ಚುತ್ತಿದ್ದಾಳೆ ಎಂದು ಅತ್ತೆಯನ್ನೇ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಕಲಘಟಗಿ ತಾಲ್ಲೂಕಿನ ಬಿಸರಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ 10 ಗಂಟೆಗೆ ನಡೆದಿದೆ.
ಬಿಸರಳ್ಳಿ ಗ್ರಾಮದ ಮಂಜವ್ವ ಇಂಗಳಹಳ್ಳಿ ಎಂಬ 48 ವರ್ಷದ ಮಹಿಳೆಯನ್ನು ಆಕೆಯ ಅಳಿಯ ಪ್ರಭಯ್ಯ ಎಂಬಾತನೇ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದಾನೆ. ಪ್ರಭಯ್ಯ ನಾಲ್ಕು ವರ್ಷಗಳ ಹಿಂದೆ ಕೊಲೆಯಾದ ಮಂಜವ್ವಳ ಮಗಳನ್ನು ಪ್ರೀತಿಸಿ ಮದುವೆಯಾಗಿದ್ದ. ಆದ್ರೆ, ಮಂಜವ್ವ ಗಂಡ ಹೆಂಡತಿ ನಡುವೆ ಜಗಳ ತಂದಿಡುತ್ತಿದ್ದಳು ಎಂಬ ಕಾರಣಕ್ಕೆ ಕೊಲೆ ಮಾಡಿರೋ ಶಂಕೆ ವ್ಯಕ್ತವಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೆ ಸ್ಥಳಕ್ಕೆ ಕಲಘಟಗಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಆರೋಪಿ ಸಿಕ್ಕ ನಂತರವೇ ಕೊಲೆಗೆ ಅಸಲಿ ಕಾರಣ ಏನೆಂದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.