ಕಲಘಟಗಿಯ ಹುಲಗಿನಕಟ್ಟಿಯಲ್ಲಿ “ಅತಿಮಾನುಷ’ ಕೊಲೆ
1 min readಧಾರವಾಡ: ಏಳು ಹೆಜ್ಜೆಗಳನ್ನಿಟ್ಟು ಇನ್ನೂ ಏಳು ತಿಂಗಳು ಕಳೆದಿದರಲಿಲ್ಲ. ಅಷ್ಟರಲ್ಲಿಯೇ ಪಾಪಿ ಪತಿರಾಯ ಪತ್ನಿಯನ್ನ ಕೊಲೆ ಮಾಡಿರುವ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಹುಲಗಿನಕಟ್ಟಿ ಗ್ರಾಮದಲ್ಲಿ ಸಂಭವಿಸಿದೆ.
ಲಕ್ಷ್ಮೀ ಚಿಕ್ಕಮ್ಮನವರ ಎಂಬ ಮಹಿಳೆಯ ಕೊಲೆಯಾಗಿದ್ದು, ಪತಿ ವೀರಭದ್ರನೇ ಹೊಲದಲ್ಲಿ ಕೊರಳಿಗೆ ಉರುಲು ಹಾಕಿ ಕೊಲೆ ಮಾಡಿದ್ದಾನೆ, ಲಕ್ಷ್ಮೀ ಪಾಲಕರು ದೂರು ನೀಡಿದ್ದಾರೆ.
ತನ್ನದೇ ಸಂಬಂಧಿಕರ ಹೊಲಕ್ಕೆ ಕರೆದುಕೊಂಡು ಹೋಗಿದ್ದ ಪತಿಯೊಂದಿಗೆ ಹೆಜ್ಜೆ ಹಾಕಿದ್ದ ಲಕ್ಷ್ಮೀಯನ್ನ ಪತಿಯೇ ಇನ್ನಿಲ್ಲವಾಗುವಂತೆ ಮಾಡಿದ್ದಾನೆಂದು ಆರೋಪ ಬಂದಿದ್ದು, ಘಟನಾ ಸ್ಥಳಕ್ಕೆ ಕಲಘಟಗಿ ಠಾಣೆ ಇನ್ಸಪೆಕ್ಟರ್ ವಿಜಯ ಬಿರಾದಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪತಿ ವೀರಭದ್ರ ಕೂಡಾ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದನೆಂದು ಹೇಳಲಾಗಿದ್ದು, ಘಟನೆಯ ಬಗ್ಗೆ ಈಗಾಗಲೇ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಆರಂಭಿಸಿದ್ದಾರೆ.